Asianet Suvarna News Asianet Suvarna News

3ನೇ ದಿನ ED ವಿಚಾರಣೆ ಮುಗಿಸಿಕೊಂಡು ಹೊರ ಬಂದ ಡಿಕೆಶಿ ಖಡಕ್ ಮಾತು

ಇಂದು [ಸೋಮವಾರ] ಮೂರನೇಯ ದಿನ ಇಡಿ ವಿಚಾರಣೆಗೆ ಹೋಗುವ ಮುನ್ನ ಕಣ್ಣೀರಿಟ್ಟ ಮಾಜಿ ಸಚಿವ ಡಿಕೆ ಶಿವಕುಮಾರ್, ರಾತ್ರಿ ಕಚೇರಿಯಿಂದ ಹೊರ ಬಂದು ಖಡಕ್ ಮಾತುಗಳನ್ನಾಡಿದ್ದಾರೆ. ಹಾಗಾದ್ರೆ ಡಿಕೆಶಿ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ಮುಂದೆ ಓದಿ.

Congress Leader  DK Shivakumar Hits Back At DyCM Ashwath Narayan Statement
Author
Bengaluru, First Published Sep 2, 2019, 9:36 PM IST

ನವದೆಹಲಿ, [ಸೆ.02]:  ಕಳೆದ ಎರಡು ದಿನಗಳಿಂದ ನವದೆಹಲಿಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್  ಇಂದು [ಸೋಮವಾರ]  3ನೇ ದಿನ ವಿಚಾರಣೆ ಮುಕ್ತಾಯಗೊಂಡಿದೆ.

ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು, ಮತ್ತೆ ನಾಳೆ [ಮಂಗಳವಾರ] ವಿಚಾರಣೆಗ ಹಾಜರಾಗುವಮತೆ ಡಿಕೆಶಿಗೆ ಹೇಳಿ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆಶಿ ನಾಳೆಯೂ ಸಹ ಇಡಿ ಕಚೇರಿಗೆ ಹೋಗಬೇಕಿದೆ.

ಕರಗಿದ ಕನಕಪುರ ಬಂಡೆ; ವಿಷಯವೊಂದು ನೆನೆದು ಕಣ್ಣೀರು ಹಾಕಿದ ಡಿಕೆಶಿ

ಇನ್ನು ಸತತ 8 ಗಂಟೆಗಳ ಕಾಲ ವಿಚಾರಣೆ ಎದುರಿಸಿ ಇಡಿ ಕಚೇರಿಯಿಂದ ಹೊರಬಂದ ಡಿಕೆ ಶಿವಕುಮಾರ್ ಮಾಧ್ಯಮಗಳ ಮುಂದೆ ಖಡಕ್ ಮಾತುಗಳನ್ನಾಡಿದ್ದಾರೆ.  ‘ನಾನು ಯಾರಿಗೂ ಹೆದರಲ್ಲ. ಇಂದು ಹಿರಿಯರ ಪೂಜೆಯಲ್ಲಿ ಭಾಗಿಯಾಗದಿದ್ದಕ್ಕೆ ಬೇಸರ ಅಷ್ಟೇ. ಯಾರ ಅನುಕಂಪ ಗಿಟ್ಟಿಸಲು ನಾನು ಕಣ್ಣೀರು ಹಾಕಿಲ್ಲ. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ, ಹೆದರೋದು ಇಲ್ಲ. ರಾಜಕಾರಣ ಮಾಡೋದಕ್ಕೆಂದೇ ಬೆಂಗಳೂರಿಗೆ ಬಂದವನು. ನನಗೂ ರಾಜಕಾರಣ ಮಾಡುವುದಕ್ಕೆ ಬರುತ್ತೆ. ನಾನು ಯಾರಿಗೂ ಮೋಸ ಮಾಡಿಲ್ಲ ಎಂದು ಏರು ಧ್ವನಿಯಲ್ಲಿ ಹೇಳಿದರು.

ಇನ್ನು ಅನುಕಂಪ ಗಿಟ್ಟಿಸಿಕೊಳ್ಳಲು ಅತ್ತಿದ್ದಾರೆ ಎನ್ನುವ  ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಸಿದ ಡಿಕೆಶಿ, ನನಗೆ ಅನುಕಂಪ ಗಿಟ್ಟಿಸಿಕೊಳ್ಳಬೇಕಾದ ಅನಿವಾರ್ಯ ಇಲ್ಲ. ರಾಜಕಾರಣ ಮಾಡಲೇಬೇಕೆಂದು ಬಂದವನು ನಾನು ಎಂದು ಈಗಾಗಲೇ ಹೇಳಿದ್ದೇನೆ. ರಾಜಕೀಯವಾಗಿ ಏನೇ ಬಂದರೂ ಎದುರಿಸುತ್ತೇನೆ. ನಾನು ಯಾವುದಕ್ಕೂ ಹೆದರುವ ಮಗನಲ್ಲ ಎಂದು ಗರಂ ಆಗಿಯೇ ತಿರುಗೇಟು ಕೊಟ್ಟರು.

ಡಿಕೆ ಶಿವಕುಮಾರ್ ಕಣ್ಣೀರಿಗೆ ಮಿಡಿದ ಕುಮಾರಸ್ವಾಮಿ ಮನ

ಅಶ್ವಥ್ ನಾರಾಯಣ ಹೇಳಿಕೆ ಗಮನಿಸಿದ್ದೇನೆ. ಅವರಿಗೆ ಉತ್ತಮ ಅವಕಾಶ ಸಿಕ್ಕಿದೆ, ಯಶಸ್ವಿಯಾಗಲಿ. ರಾಜಕೀಯ ಬಿಟ್ಟು ಉದ್ಯಮಿಯಾಗಲಿ ಎಂದು ಸಲಹೆ ನೀಡಿದ್ದಾರೆ. ಅಶ್ವಥ್ ನಾರಾಯಣ ಬಹಳ ದೊಡ್ಡವರು, ಅವರ ಸಲಹೆ ಸ್ವೀಕರಿಸುವೆ ವ್ಯಂಗ್ಯವಾಡಿದರು.

ಅಷ್ಟಕ್ಕೂ ಅಶ್ವಥ್ ನಾರಾಯಣ ಹೇಳಿದ್ದೇನು?
ಭಾವನಾತ್ಮಕವಾಗಿ ಅಳುವ ಮೂಲಕ ಅನುಕಂಪ ಗಿಟ್ಟಿಸುವ ಕೆಲಸ ಮಾಡ್ತಿದ್ದಾರೆ.  ಕಾನೂನಿನ ಚೌಕಟ್ಟಿನಲ್ಲಿ ಅವರು ಮಾಡಿರುವ ಒಳ್ಳೆಯದು ಕೆಟ್ಟದ್ದು  ಸ್ಕ್ರುಟಿನಿ ಆಗಬೇಕು, ಅದು ಆಗುತ್ತಿದೆ. ಅವರು ಏನು ಮಾಡಿದ್ದಾರೆ? ಏನು ಆಗಿದೆ? ಏನು ಹೋಗಿದೆ? ಎಲ್ಲವೂ ಸಮಾಜಕ್ಕೆ ಗೊತ್ತಿದೆ. ಮಾಡಿರುವ ಕರ್ಮಗಳಿಗೆ ಎಲ್ಲವೂ ಕಾಂಪ್ರಮೈಸ್ ಆದ್ರೆ ಜನ ಎಲ್ಲಿಗೆ ಹೋಗಬೇಕು?  ಈಗ ಅತ್ತು ಕರೆದು ಮಾಡಿದ್ರೆ? ಕಾನೂನಿನ ಅಡಿಯಲ್ಲಿ ಒಳಪಡಬೇಕು. ಅದು ಆಗುತ್ತಿದೆ. ‌ ಉಪ್ಪು ತಿಂದವನು‌ ನೀರು ಕುಡಿಯಲೇಬೇಕು. ಕುಡೀತಾ ಇದ್ದಾನೆ ಎಂದು ಇಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.

Follow Us:
Download App:
  • android
  • ios