ಡಿಕೆ ಶಿವಕುಮಾರ್ ಕಣ್ಣೀರಿಗೆ ಮಿಡಿದ ಕುಮಾರಸ್ವಾಮಿ ಮನ
ಕನಕಪುರ ಬಂಡೆ ಎಂದೇ ಎಂದೇ ಖ್ಯಾತರಾಗಿರುವ ಡಿ.ಕೆ.ಶಿವಕುಮಾರ್ ಅವರು ಇಂದು ಭಾವುಕರಾಗಿ ಬಿಟ್ಟರು. ಗಣೇಶ್ ಹಬ್ಬಕ್ಕೆ ಇಡಿಯವರು ವಿನಾಯಿತಿ ನೀಡಿಲ್ಲವೆಂದು ಡಿಕೆಶಿ ಕಣ್ಣೀರು ಹಾಕಿದ್ದಾರೆ. ಡಿಕೆಶಿಯವರ ಕಣ್ಣೀರಿಗೆ ಕುಮಾರಸ್ವಾಮಿ ಮನ ಮಿಡಿದಿದೆ.
ಬೆಂಗಳೂರು/ನವದೆಹಲಿ, [ಸೆ.02]: ಮಾಜಿ ಸಚಿವ ಡಿ.ಎ ಶಿವಕುಮಾರ್ ಅವರು ಕಳೆದ ಎರಡು ದಿನಗಳಿಂದ ನವದೆಹಲಿಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ವಿಚಾರಣೆ ಎದುರಿಸುತ್ತಿದ್ದಾರೆ.
ಆದ್ರೆ, ಇಂದು [ಸೋಮವಾರ] ಮೂರನೇಯ ದಿನ ಇಡಿ ವಿಚಾರಣೆಗೆ ತೆರಳುವ ಮುನ್ನಾ ಡಿಕೆ ಶಿವಕುಮಾರ್ ಮಾಧ್ಯಮಗಳ ಮುಂದೆ ಗದ್ಗದಿತರಾದರು. ಉಕ್ಕಿ ಬರುತ್ತಿದ್ದ ಅಳುವನ್ನು ತುಟಿ ಕಚ್ಚಿ ತಡೆದು ಮಾಧ್ಯಮಗಳ ಮುಂದೆ ಮಾತನಾಡಿದರು.
ಕರಗಿದ ಕನಕಪುರ ಬಂಡೆ; ವಿಷಯವೊಂದು ನೆನೆದು ಕಣ್ಣೀರು ಹಾಕಿದ ಡಿಕೆಶಿ
ಪೂರ್ವಿಕರ ಸಮಾಧಿಗಳಿಗೆ ಎಡೆ ಇಟ್ಟು ಪೂಜೆ ಮಾಡಲು ಬಿಡಲಿಲ್ಲ ಎಂದು ಕಣ್ಣೀರು ಹಾಕಿದರು. ಡಿಕೆಶಿ ಕಣ್ಣೀರಿಗೆ ಇತ್ತ ಕುಮಾರಸ್ವಾಮಿ ಮನ ಮಿಡಿದಿದ್ದು, ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಕುತಂತ್ರದ ರಾಜಕಾರಣ ನಡೆಸುತ್ತಿದೆ. ನಾವು ಇಂತಹ ಆಧಾರರಹಿತ ಆರೋಪಗಳ ವಿರುದ್ಧ ಬಲಿಷ್ಠ ಆಗಬೇಕು. ಕುತಂತ್ರ ರಾಜಕಾರಣ ಎದುರಿಸುವ ಶಕ್ತಿ ಡಿಕೆಶಿಗೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ಹಿರಿಯರ ಪೂಜೆಗೆ ಊರಿಗೆ ಹೋಗಲು ಆಗಲಿಲ್ಲ. ಮಾನವೀಯತೆ ದೃಷ್ಟಿಯಿಂದ ಆದ್ರೂ ಅವಕಾಶ ನೀಡಬೇಕಿತ್ತು. ಆದ್ರೆ ಇಡಿ ಅಧಿಕಾರಿಗಳು ಹಬ್ಬಕ್ಕೆ ಹೋಗಲು ಅವಕಾಶ ನೀಡಲಿಲ್ಲ. ಇದರಿಂದ ನನಗೆ ತುಂಬಾ ದುಃಖ ಉಂಟುಮಾಡಿದೆ ಎಂದು ಮಾಧ್ಯಮದ ಎದುರು ಕಣ್ಣೀರಿಟ್ಟರು. ಇತ್ತ ಡಿಕೆಶಿ ತಾಯಿ ಗೌರಮ್ಮ ಕೂಡ ಮಗನ ಕಣ್ಣಲ್ಲಿ ಕಣ್ಣೀರು ನೋಡಿ ಭಾವುಕರಾಗಿದ್ದಾರೆ.