ಸ್ವಾತಂತ್ರ್ಯ ಪೂರ್ವದಲ್ಲೇ ಈ ದೇವಸ್ಥಾನದ ಹೆಸರಲ್ಲಿ ಸರ್ವೆ ನಂಬರ್ 283ರಲ್ಲಿ 16ಎಕರೆ ಭೂಮಿಯನ್ನು ನೀಡಲಾಗಿತ್ತು. ಆದರೆ 2012 ರಲ್ಲಿ ಅಂದಿನ ಡಿ.ಸಿ. ಸೋಮಶೇಖರ್ ಈ ಜಾಗವನ್ನು ಜಿ.ಜೆ.ರಾಜಣ್ಣರ ಹೆಸರಿಗೆ ಖಾತೆ ಮಾಡಿಸಿಕೊಟ್ಟಿದ್ದಾರೆ.
ತುಮಕೂರು (ಅ.20): ತುಮಕೂರು ನಗರದಲ್ಲಿ ಬರೊಬ್ಬರಿ 16 ಎಕರೆ ಜಾಗವನ್ನು ಕಾಂಗ್ರೆಸ್ ಮುಖಂಡ ಕಬಳಿಸಿ ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಮುಖಂಡರು ಹಾಗೂ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜಿ.ಜೆ.ರಾಜಣ್ಣರ ಮೇಲೆ ಇಂಥದ್ದೊಂದು ಆರೋಪ ಕೇಳಿ ಬಂದಿದೆ.
ತಹಶೀಲ್ದಾರ ಕಚೇರಿಯ ಆವರಣದಲ್ಲಿರುವ ವಿನಾಯಕ ದೇವಸ್ಥಾನದ 16 ಎಕರೆ 31 ಗುಂಟೆ ಭೂಮಿಯನ್ನು ಪ್ರಭಾವ ಬಳಸಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲೇ ಈ ದೇವಸ್ಥಾನದ ಹೆಸರಲ್ಲಿ ಸರ್ವೆ ನಂಬರ್ 283ರಲ್ಲಿ 16ಎಕರೆ ಭೂಮಿಯನ್ನು ನೀಡಲಾಗಿತ್ತು. ಆದರೆ 2012 ರಲ್ಲಿ ಅಂದಿನ ಡಿ.ಸಿ. ಸೋಮಶೇಖರ್ ಈ ಜಾಗವನ್ನು ಜಿ.ಜೆ.ರಾಜಣ್ಣರ ಹೆಸರಿಗೆ ಖಾತೆ ಮಾಡಿಸಿಕೊಟ್ಟಿದ್ದಾರೆ.
ಆರ್.ಟಿ.ಐ ಕಾರ್ಯಕರ್ತ ನಾರಣಾಚಾರ್ ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದಾಗ ಭೂಮಿ ಗುಳುಂ ಮಾಡಿರೋದು ಬೆಳಕಿಗೆ ಬಂದಿದೆ.