ಬೆಂಗಲೂರು[ಸೆ.26]: 15 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್‌ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಅಖೈರುಗೊಳಿಸಲು ಮಹತ್ವದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ಗುರುವಾರ  ಬೆಂಗಳೂರಿನಲ್ಲಿ ನಡೆದಿದ್ದು, ಈ ವೇಳೆ ಕಣಕ್ಕಿಳಿಯಲಿರುವ 10 ಮಂದಿ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ. ಈ ಸಭೆಗೆ ಪೂರ್ವಭಾವಿಯಾಗಿ ಅರ್ಹರನ್ನು ಗುರುತಿಸಲು ಬುಧವಾರ ದಿನವಿಡೀ ಸರಣಿ ಸಭೆ ನಡೆಸಲಾಗಿತ್ತು. ಇನ್ನು 5 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್ ಆಗಬೇಕಿದ್ದು, ಈ ಹೆಸರುಗಳೂ ಶೀಘ್ರದಲ್ಲೇ ಹೊರ ಬೀಳುವ ಸಾಧ್ಯತೆಗಳಿವೆ.

15 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಿಗೆ ಕಾಂಗ್ರೆಸ್ ಕದನ ಕಲಿಗಳು ರೆಡಿ

ಹೊಸಕೋಟೆ - ಪದ್ಮಾವತಿ ಸುರೇಶ್

ಕೆ.ಆರ್.ಪುರಂ - ಎಂ. ನಾರಾಯಣಸ್ವಾಮಿ

ಕೆ.ಆರ್.ಪೇಟೆ - ಕೆ.ಬಿ ಚಂದ್ರಶೇಖರ್

ಹುಣಸೂರು - ಹೆಚ್.ಪಿ.ಮಂಜುನಾಥ್

ಗೋಕಾಕ್ - ಲಖನ್ ಜಾರಕಿಹೋಳಿ

ಕಾಗವಾಡ - ಪ್ರಕಾಶ್ ಹುಕ್ಕೇರಿ

ರಾಣಿಬೆನ್ನೂರು - ಕೆ.ಬಿ.ಕೋಳಿವಾಡ

ಹೊಸಪೇಟೆ - ಸೂರ್ಯ ನಾರಾಯಣ ರೆಡ್ಡಿ

ಹಿರೆಕೇರೂರು- ಬನ್ನಿಕೋಡ್

ಮಹಾಲಕ್ಷ್ಮಿ ಲೇಔಟ್- ಶಿವರಾಜು

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.