ನೋಟು ನಿಷೇಧ ಘೋಷಣೆಯಾಗುವ ಮುಂಚೆ ಬಿಜೆಪಿ ಕಾರ್ಯಕರ್ತರು ಕೋಟಿಗಟ್ಟಲೇ ಹಣವನ್ನು ಜಮಾ ಮಾಡಿರುವುದು ಕಾಕತಾಳಿಯವೆನ್ನುವ ಹಾಗಿಲ್ಲ. ಈ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕೆಂದು ಕಾಂಗ್ರೆಸ್ ನಾಯಕಿ ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.

ನವದೆಹಲಿ (ನ.12): ಕೇಂದ್ರ ಸರ್ಕಾರ ತೆಗೆದುಕೊಳ್ಳಲಿರುವ ನೋಟು ನಿಷೇಧ ಕ್ರಮವು ಬಿಜೆಪಿ ವಲಯದಲ್ಲಿ ಮುಂಚಿತವಾಗಿ ತಿಳಿದಿತ್ತು ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ನೋಟು ನಿಷೇಧವಾಗಲಿದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಮೊದಲೇ ತಿಳಿದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ನೋಟು ನಿಷೇಧ ಘೋಷಣೆಯಾಗುವ ಮುಂಚೆ ಬಿಜೆಪಿ ಕಾರ್ಯಕರ್ತರು ಕೋಟಿಗಟ್ಟಲೇ ಹಣವನ್ನು ಜಮಾ ಮಾಡಿರುವುದು ಕಾಕತಾಳಿಯವೆನ್ನುವ ಹಾಗಿಲ್ಲ. ಈ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕೆಂದು ಕಾಂಗ್ರೆಸ್ ನಾಯಕಿ ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ನೋಟು ನಿಷೇಧ ಕ್ರಮದಲ್ಲಿ ಹಗರಣವಾಗಿದೆ ಎಂದು ಆರೋಪಿಸಿದ್ದಾರೆ. ನೋಟು ನಿಷೇಧ ಕ್ರಮದ ಬಗ್ಗೆ ಪ್ರಧಾನಿಯವರು, ಕಪ್ಪುಹಣ ಹೊಂದಿರುವ ತಮ್ಮ ಮಿತ್ರರಿಗೆ ಮುಂಚಿತವಾಗಿ ತಿಳಿಸಿದ್ದಾರೆ ಎಂದು ಕೇಜ್ರಿವಾಲ್ ಆರೊಪಿಸಿದ್ದಾರೆ.