ನವದೆಹಲಿ (ಅ.07): ಪ್ರಧಾನಿ ನರೇಂದ್ರ ಮೊದಿ ಹುತಾತ್ಮ ಯೋಧರನ್ನು ರಾಜಕೀಯ ಉದ್ದೇಶಕ್ಕಾಗಿ ‘ದಳ್ಳಾಳಿ’ಗಳ ತರಹ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸಿಕೊಂಡಿದೆ.

ಕಾಂಗ್ರೆಸ್ ಅಧಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಭಾರತೀಯ ಸೇನೆ ನಡೆಸಿರುವ ಸರ್ಜಿಕಲ್ ದಾಳಿಯನ್ನು ಬೆಂಬಲಿಸಿದ್ದಾರೆ. ಪ್ರಧಾನಿ ಮೋದಿ ಸರ್ಕಾರದ ಸಚಿವರು ಆ ದಾಳಿಯನ್ನು ರಾಜಕೀಯ ಲಾಭಕ್ಕಾಗಿ ಬಳಸುವುದನ್ನು ರಾಹುಲ್ ಗಾಂಧಿಯವರು ಆಕ್ಷೇಪಿಸಿದ್ದಾರೆ, ಎಂದು ಕಾಂಗ್ರೆಸ್ ನಾಯಕ ಪಿ.ಸಿ.ಚಾಕೋ ಹೇಳಿದ್ದಾರೆ.

ಸರ್ಜಿಕಲ್ ದಾಳಿ ಬಗ್ಗೆ ಹೆಚ್ಚು ಮಾತನಾಡಬೇಡಿ ಎಂದು ಸ್ವತಹ ಪ್ರಧಾನಿ ಮೋದಿ ತಮ್ಮ ಸಚಿವರಿಗೆ ಹಾಗೂ ಪಕ್ಷದವರಿಗೆ ಹೇಳಬೇಕಾಯಿತು ಎಂಬುವುದನ್ನು ಚಾಕೋ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.