ನಾಳೆ ಮಧ್ಯರಾತ್ರಿ ಸಂಸತ್’ನಲ್ಲಿ ನಡೆಯಲಿರುವ ಜಿಎಸ್’ಟಿ ವಿಶೇಷ ಸಭೆಯಲ್ಲಿ ಭಾಗವಹಿಸದೇ ಇರಲು ಕಾಂಗ್ರೆಸ್ ನಿರ್ಧರಿಸಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಭಾಗವಹಿಸುತ್ತಿಲ್ಲ ಎಂದು ಕಾಂಗ್ರೆಸ್'ನ ಸತ್ಯವ್ರತ್ ಚತುರ್ವೇದಿ ಹೇಳಿದ್ದಾರೆ.

ನವದೆಹಲಿ (ಜೂ.29): ನಾಳೆ ಮಧ್ಯರಾತ್ರಿ ಸಂಸತ್’ನಲ್ಲಿ ನಡೆಯಲಿರುವ ಜಿಎಸ್’ಟಿ ವಿಶೇಷ ಸಭೆಯಲ್ಲಿ ಭಾಗವಹಿಸದೇ ಇರಲು ಕಾಂಗ್ರೆಸ್ ನಿರ್ಧರಿಸಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಭಾಗವಹಿಸುತ್ತಿಲ್ಲ ಎಂದು ಕಾಂಗ್ರೆಸ್'ನ ಸತ್ಯವ್ರತ್ ಚತುರ್ವೇದಿ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬೇರೆ ಸಂಸದರೊಂದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್’ರವರನ್ನು ಭೇಟಿಯಾದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ. ಜಿಎಸ್’ಟಿ ವಿಚಾರವಾಗಿ ಕಾಂಗ್ರೆಸ್'ನಲ್ಲಿ ಎರಡು ಬಣ ಸೃಷ್ಟಿಯಾಗಿದೆ. ಒಂದು ಬಣ, ಜಿಎಸ್’ಟಿ ಕಾಂಗ್ರೆಸ್’ನ ಕನಸಿನ ಕೂಸು. ಇದೀಗ ಆಡಳಿತಾರೂಡ ಬಿಜೆಪಿ ಅದನ್ನು ಜಾರಿಗೆ ತರಲು ಹೊರಟಿದೆ. ಹಾಗಾಗಿ ನಾಳೆ ನಡೆಯಲಿರುವ ಜಿಎಸ್’ಟಿ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಭಾಗವಹಿಸಬೇಕು ಎಂದು ವಾದಿಸಿದರೆ, ಇನ್ನೊಂದು ಬಣ, ಬಿಜೆಪಿ ಸರ್ಕಾರ ಜಿಎಸ್’ಟಿಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ಹೊರಟಿದೆ. ಅದರಲ್ಲಿರುವ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಸಣ್ಣ ಉದ್ಯಮಿಗಳಿಗೆ. ಬ್ಯುಸಿನೆಸ್’ಮೆನ್’ಗಳಿಗೆ ಅನಾನುಕೂಲ ಮಾಡಲು ಹೊರಟಿದೆ ಎಂದು ವಾದಿಸಿದೆ. ಇನ್ನು ತೃಣಮೂಲ ಕಾಂಗ್ರೆಸ್ ಈಗಾಗಲೇ ಬಹಿಷ್ಕಾರ ಹಾಕಲು ನಿರ್ಧರಿಸಿರುವುದಾಗಿ ಘೋಷಿಸಿದೆ.