50  ದಿನಗಳಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬರುವುದೆಂದು ಪ್ರಧಾನಿ ಮೋದಿ ಘೋಷಿಸಿದ್ದರು. ನಾಳೆಯಿಂದ ಜನರು ಎಂದಿನಂತೆ ಬ್ಯಾಂಕುಗಳಿಂದ ಹಣವನ್ನು ಡ್ರಾ  ಮಾಡಬಹುದೆ? ಎಲ್ಲಾ ಏಟಿಎಮ್ ಯಂತ್ರಗಳು ನಾಳೆಯಿಂದ ಕೆಲಸ ಮಾಡಲಾರಂಭಿಸುತ್ತವೆಯೋ? ನೋಟು ಅಮಾನ್ಯ ಕ್ರಮದಿಂದ ಆಗಿರುವ ನಷ್ಟವನ್ನು ಸರ್ಕಾರ ಭರಿಸಲಿದೆಯೋ? ಎಂದು ಪಕ್ಷದ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ್ ಕೇಳಿದ್ದಾರೆ.

ನವದೆಹಲಿ (ಡಿ.30): ನೋಟು ಅಮಾನ್ಯ ಕ್ರಮ ಘೋಷಿಸುವಾಗ ಪ್ರಧಾನಿ ಮೋದಿ ಹೇಳಿದ್ದ 50 ದಿನಗಳ ಗಡುವು ಇಂದು ಮುಗಿಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಪ್ರಧಾನಿ ಮೋದಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದು, ಕೂಡಲೇ ದೇಶದ ಜನತೆಗೆ ಉತ್ತರಿಸುವಂತೆ ಆಗ್ರಹಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

50 ದಿನಗಳಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬರುವುದೆಂದು ಪ್ರಧಾನಿ ಮೋದಿ ಘೋಷಿಸಿದ್ದರು. ನಾಳೆಯಿಂದ ಜನರು ಎಂದಿನಂತೆ ಬ್ಯಾಂಕುಗಳಿಂದ ಹಣವನ್ನು ಡ್ರಾ ಮಾಡಬಹುದೆ? ಎಲ್ಲಾ ಏಟಿಎಮ್ ಯಂತ್ರಗಳು ನಾಳೆಯಿಂದ ಕೆಲಸ ಮಾಡಲಾರಂಭಿಸುತ್ತವೆಯೋ? ನೋಟು ಅಮಾನ್ಯ ಕ್ರಮದಿಂದ ಆಗಿರುವ ನಷ್ಟವನ್ನು ಸರ್ಕಾರ ಭರಿಸಲಿದೆಯೋ? ಎಂದು ಪಕ್ಷದ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ್ ಕೇಳಿದ್ದಾರೆ.

ನೋಟು ಅಮಾನ್ಯ ಕ್ರಮದಿಂದ ತೀರಾ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ಶೇ.20 ರಷ್ಟು ಹೆಚ್ಚಿಸುವಿರಾ? ಸಣ್ಣ ವರ್ತಕರಿಗೆ ಶೇ.50 ರಷ್ಟು ತೆರಿಗೆ ವಿನಾಯಿತಿ ಸಿಗುವುದೇ? ಎಂದು ಸುರ್ಜೆವಾಲಾ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.