ಬಗರ್ ಹುಕುಂ ರೈತರಿಗೆ ಭೂಮಿ ನೀಡಲು 1000 ರೂ. ಕಟ್ಟಿಸಿಕೊಳ್ಳುತ್ತೇವೆ, ಆದರೆ ನೈಸ್ ಸಂಸ್ಥೆಗೆ ಎಕರೆಗೆ 10 ರೂ. ಅಂತೆ ಭೂಮಿ ನೀಡುತ್ತೇವೆ. ನೈಸ್ ನಮ್ಮ ನೆಂಟ ಅಲ್ಲವೇ? ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ (ಡಿ.02): ನೈಸ್ ಅಕ್ರಮ ವರದಿಯು ಇಂದು ವಿಧಾನಸಭೆಯಲ್ಲಿ ಬಿಸಿಬಿಸಿ ವಾಗ್ವಾದಕ್ಕೆ ಕಾರಣವಾಯಿತು.
ವಿಧಾನಸಭೆಯಲ್ಲಿ ನೈಸ್ ಅಕ್ರಮ ವರದಿ ಬಗ್ಗೆ ಪ್ರಸ್ತಾಪಿಸಿದ ಆರ್.ಅಶೋಕ್, ನೈಸ್ ಅನ್ನೋದು ಬ್ರಹ್ಮಾಂಡ ಭ್ರಷ್ಟಾಚಾರ, ಕಾನೂನು ರೀತಿಯಲ್ಲಿ ಮೋಸ ಮಾಡುವುದು ಹೇಗೆ ಎಂದುದನ್ನು ನೈಸ್ ಮೂಲಕ ತಿಳಿಯಬಹುದು ಎಂದು ಹೇಳಿದರು.
ಬಗರ್ ಹುಕುಂ ರೈತರಿಗೆ ಭೂಮಿ ನೀಡಲು 1000 ರೂ. ಕಟ್ಟಿಸಿಕೊಳ್ಳುತ್ತೇವೆ, ಆದರೆ ನೈಸ್ ಸಂಸ್ಥೆಗೆ ಎಕರೆಗೆ 10 ರೂ. ಅಂತೆ ಭೂಮಿ ನೀಡುತ್ತೇವೆ. ನೈಸ್ ನಮ್ಮ ನೆಂಟ ಅಲ್ಲವೇ? ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ಅಶೋಕ್ ಮಾತಿಗೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ನಿಮ್ಮ ಸರ್ಕಾರ ಇತ್ತಲ್ಲ ನೀವು ಏನು ಮಾಡಿದಿರಿ? ನೀವು ಕೂಡ ಈ ಹಗರಣದ ಭಾಗವಾಗಿದ್ದೀರಿ ಎಂದು ಅಶೋಕ್’ರಿಗೆ ಸವಾಲೆಸೆದರು.
ಅದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಈಗ ನಿಮ್ಮ ಸರ್ಕಾರ ಇದೆಯಲ್ಲ ಕ್ರಮ ತೆಗೆದುಕೊಳ್ಳಿ ಎಂದು ಸವಾಲೆಸೆದರು.