ಪೂರ್ಣ ರಿಸಲ್ಟ್‌ ಅಧಿಕೃತವಾಗಿ ಪ್ರಕಟವಾಗಿದ್ದು ನಿನ್ನೆ ರಾತ್ರಿ!| ವಿವಿಪ್ಯಾಟ್‌ ಮತಗಳ ಎಣಿಕೆಯಿಂದ ಭಾರಿ ವಿಳಂಬ

ನವದೆಹಲಿ[ಮೇ.25]: ಲೋಕಸಭೆ ಚುನಾವಣೆ ನಡೆದ 542 ಲೋಕಸಭಾ ಕ್ಷೇತ್ರಗಳ ಸಂಪೂರ್ಣ ಫಲಿತಾಂಶ ಅಧಿಕೃತವಾಗಿ ಪ್ರಕಟಗೊಂಡಿದ್ದು ಶುಕ್ರವಾರ ರಾತ್ರಿ!

Add Asianetnews Kannada as a Preferred SourcegooglePreferred

ಹೌದು. ಗುರುವಾರ ಬೆಳಗ್ಗೆ ಮತ ಎಣಿಕೆ 8ಕ್ಕೆ ಆರಂಭವಾಯಿತಾದರೂ, ರಾತ್ರಿಯಾದರೂ ಎಲ್ಲ ಕ್ಷೇತ್ರಗಳ ಫಲಿತಾಂಶವನ್ನು ಪ್ರಕಟಿಸಲು ಆಯೋಗಕ್ಕೆ ಸಾಧ್ಯವಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ವೇಳೆಗೆ ಬಹುತೇಕ ಕ್ಷೇತ್ರಗಳ ಫಲಿತಾಂಶ ಬಹಿರಂಗವಾಯಿತು. ಮಧ್ಯಾಹ್ನ 12 ಗಂಟೆಯಾದರೂ ಇನ್ನೂ 4 ಕ್ಷೇತ್ರಗಳ ಫಲಿತಾಂಶ ಬಾಕಿ ಉಳಿದಿತ್ತು. ಸಂಜೆ ಹೊತ್ತಿಗೆ ಅದು 1 ಕ್ಷೇತ್ರಕ್ಕೆ ಇಳಿಯಿತು. ರಾತ್ರಿ 8ರ ವೇಳೆಗೆ ಆ ಕ್ಷೇತ್ರದ ಫಲಿತಾಂಶವೂ ಪ್ರಕಟವಾಯಿತು. ಇದರೊಂದಿಗೆ ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಪ್ರಕಟಗೊಂಡಂತೆ ಆಯಿತು.

ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ವಿವಿಪ್ಯಾಟ್‌ ಬಳಸಲಾಗಿತ್ತು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ವಿವಿಪ್ಯಾಟ್‌ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ, ಅದರಲ್ಲಿನ ಚೀಟಿಯನ್ನು ವಿದ್ಯುನ್ಮಾನ ಮತಯಂತ್ರಗಳ ಜತೆ ತುಲನೆ ಮಾಡಿ ನೋಡಬೇಕಾಗಿದ್ದ ಕಾರಣ ಫಲಿತಾಂಶ ವಿಳಂಬವಾಯಿತು. ಆದರೆ ಶುಕ್ರವಾರ ಸಂಜೆವರೆಗೂ ಸಮಯ ತೆಗೆದುಕೊಂಡ ಕ್ಷೇತ್ರಗಳು ಯಾವುವು ಎಂಬುದನ್ನು ಆಯೋಗ ತಿಳಿಸಿಲ್ಲ.