ಪತ್ರಕರ್ತ ಅಗ್ನಿ ಶ್ರೀಧರ್ ವಿರುದ್ಧ ಮಂಡ್ಯದ ಬಿಜೆಪಿ ಕಾರ್ಯಕರ್ತರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಅಗ್ನಿ ಶ್ರೀಧರ್ ವಿರುದ್ದ ರಾಷ್ಟ್ರದ್ರೋಹ ಆರೋಪ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರು (ಡಿ.25): ಪತ್ರಕರ್ತ ಅಗ್ನಿ ಶ್ರೀಧರ್ ವಿರುದ್ಧ ಮಂಡ್ಯದ ಬಿಜೆಪಿ ಕಾರ್ಯಕರ್ತರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಅಗ್ನಿ ಶ್ರೀಧರ್ ವಿರುದ್ದ ರಾಷ್ಟ್ರದ್ರೋಹ ಆರೋಪ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಅಗ್ನಿ ಶ್ರೀಧರ್ ಒಡೆತನ ಅಗ್ನಿಅಸ್ತ್ರ ಯೂಟ್ಯೂಬ್ ಚಾನಲ್ ಮತ್ತು ಬ್ಲಾಗ್ ನಲ್ಲಿ ಭಾರತ ಮಾತೆಯ ಮೇಲೆ ಅಶ್ಲೀಲ ಕವಿತೆ ಪೋಸ್ಟ್ ಮಾಡಿದ್ದಾರೆ. ಅಗ್ನಿ ಶ್ರೀಧರ್ ಅಡ್ಮಿನ್ ಆಗಿರೋ ಈ ಬ್ಲಾಗ್'ನಲ್ಲಿ ಭಾರತ ಮಾತೆಯನ್ನು ವೇಶ್ಯೆಗೆ ಹೋಲಿಸಿ ಕವಿತೆ ಯತಿರಾಜ್ ಬ್ಯಾಲಹಳ್ಳಿ ಕವಿತೆ ಬರೆದಿದ್ದಾರೆ. ಈತನ ಕವಿತೆಯಲ್ಲಿ ಭಾರತ ಮಾತೆಯ ಬಗ್ಗೆ ಅಶ್ಲೀಲ ಪದಗಳನ್ನು ಬಳಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ದೂರಿದ್ದಾರೆ.
ಅಗ್ನಿ ಶ್ರೀಧರ್ ವಿರುದ್ದ ಕ್ರಮಕ್ಕೆ ಮತ್ತು ಆತನ ಬ್ಲಾಗ್ ಮತ್ತು ಯೂಟ್ಯೂಬ್ ಚಾನೆಲ್ ನಿಷೇಧಕ್ಕೆ ಒತ್ತಾಯಪಡಿಸಿದ್ದಾರೆ.
