ಪ್ರೀತಿಸಿದ ಯುವತಿ ಮನೆಯವರ ಕಿರುಕುಳಕ್ಕೆ ಬೇಸತ್ತ ಯುವಕನೊಬ್ಬ ಸೆಲ್ಫೀ ವೀಡಿಯೋ ಮಾಡಿಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೊರವಿನಕೊಪ್ಪ ಗ್ರಾಮದ ಮಂಜುನಾಥ ಏಣಗಿ (26) ಆತ್ಮಹತ್ಯೆ ಮಾಡಿಕೊಂಡವರು. ತಮ್ಮ ಮನೆಯಲ್ಲೇ ಸೆಲ್ಫೀ ವಿಡಿಯೋ ಮಾಡಿಕೊಂಡು, ನಂತರ ವಿಷ ಸೇವಿಸಿ ಮೃತಪಟ್ಟಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಯುವಕ ಅದೇ ಗ್ರಾಮದ ಯುವತಿಯನ್ನ ಪ್ರೀತಿಸುತ್ತಿದ್ದ. ಇಬ್ಬರ ಮನೆಗೂ ಈ ವಿಚಾರ ಗೊತ್ತಿತ್ತು. ಪ್ರೀತಿಸುತ್ತಿದ್ದ ಯುವತಿಯನ್ನು ಬಿಡುವಂತೆ ಹಾಗೂ 10 ಲಕ್ಷ ರೂ.ಗೆ ಹಣ ನೀಡದಿದ್ರೆ, ಊರಿನಲ್ಲಿ ಮಾನ ಹರಾಜು ಹಾಕುವಂತೆ ಬೆದರಿಕೆ ಹಾಕಲಾಗಿತ್ತು. ಇದಕ್ಕೆ ಹೆದರಿ ಈಗಾಗಲೇ ಏಳು ಲಕ್ಷ ಹಣ ನೀಡಿದ್ದ ಯುವಕ. ಮತ್ತೆ 3 ಲಕ್ಷ ರೂ. ಹಣ ನೀಡುವಂತೆ ಪೀಡಿಸಿದ ಹಿನ್ನೆಲೆಯಲ್ಲಿ ಮನ ನೊಂದಿದ್ದಾನೆ.

ಯುವತಿ ಮನೆಯವರ ಕಿರುಕುಳ ಹಾಗೂ ತನಗಾಗಿರುವ ಅನ್ಯಾಯದ ಕುರಿತು ಹತ್ತು ನಿಮಿಷಗಳ ಸೆಲ್ಫೀ ವಿಡಿಯೋ ಮಾಡಿ, ನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿ ಮನೆಯವರು ಪರಾರಿಯಾಗಿದ್ದಾರೆ.