ಆಪ್’ಗೆ ಧೈರ್ಯವಿದ್ದರೆ  ಹ್ಯಾಕಥಾನ್ ನಲ್ಲಿ ಭಾಗವಹಿಸಿ ಇವಿಎಂನನ್ನು ಹ್ಯಾಕ್ ಮಾಡಿ ತೋರಿಸಲಿ. ಮೇ ಅಂತ್ಯದೊಳಗೆ ಹ್ಯಾಕಥಾನ್ ನನ್ನು ಆಯೋಜಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. ಇದರಲ್ಲಿ ಭಾಗವಹಿಸುವುದಾಗಿ ಆಪ್ ದೃಢಪಡಿಸಿದೆ.

ನವದೆಹಲಿ (ಮೇ.09): ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯ ಎಂಬುದನ್ನು ದೆಹಲಿ ವಿಧಾನಸಭೆಯಲ್ಲಿಂದು ಪ್ರಾತಕ್ಷಿಕೆ ಮೂಲಕ 1 ತಾಸು ತೋರಿಸಲಾಯಿತು.

ಪ್ರಾತಕ್ಷಿಕೆ ತೋರಿಸಲು ಆಮ್ ಆದ್ಮಿಗೆ ಎವಿಎಂ ಎಲ್ಲಿ ಸಿಕ್ತು? ಚುನಾವಣಾ ಆಯೋಗದ ಅನುಮತಿಯಿಲ್ಲದೇ ಪಡೆದಿದ್ದರೆ ಅಕ್ರಮವಾಗುತ್ತದೆ. ಒಂದು ವೇಳೆ ನಕಲು ಯಂತ್ರವನ್ನು ಬಳಸಿದ್ದರೆ ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಆಪ್’ಗೆ ಧೈರ್ಯವಿದ್ದರೆ ಹ್ಯಾಕಥಾನ್ ನಲ್ಲಿ ಭಾಗವಹಿಸಿ ಇವಿಎಂನನ್ನು ಹ್ಯಾಕ್ ಮಾಡಿ ತೋರಿಸಲಿ. ಮೇ ಅಂತ್ಯದೊಳಗೆ ಹ್ಯಾಕಥಾನ್ ನನ್ನು ಆಯೋಜಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. ಇದರಲ್ಲಿ ಭಾಗವಹಿಸುವುದಾಗಿ ಆಪ್ ದೃಢಪಡಿಸಿದೆ.

ಇಂದು ವಿಧಾನಸಭೆಯಲ್ಲಿ ಬಳಸಿದ ಇವಿಎಂ ನಿಜವಾದದ್ದಲ್ಲ. ಹ್ಯಾಕಥಾನ್ ನಲ್ಲಿ ನಿಜವಾದ ಇವಿಎಂನನ್ನು ಹ್ಯಾಕ್ ಮಾಡುವಲ್ಲಿ ಆಪ್ ಸೋಲನುಭವಿಸುತ್ತದೆ. ಇದೊಂದು ಗೇಮ್ ಅಷ್ಟೇ ಎಂದು ಮೂಲಗಳು ತಿಳಿಸಿವೆ.

ಎವಿಎಂಗಳ ಬಗ್ಗೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಚರ್ಚೆ ನಡೆಸಲು ಚುನಾವಣಾ ಆಯೋಗ ಶುಕ್ರವಾರ ಸರ್ವಪಕ್ಷಗಳ ಸಭೆ ಕರೆದಿದೆ.