ಒಸ್ಲಾ(ಅ.7): ಕೊಲಂಬೊಯಾದ ಅಧ್ಯಕ್ಷ ಜಾನ್ ಮ್ಯಾನುಯಲ್ ಸಂಟೋಸ್ ಅವರಿಗೆ 2016ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ದೊರಕಿದೆ. ಕೊಲಂಬಿಯಾದ ಬಂಡುಕೋರರ ವಿರುದ್ಧ ಮಹತ್ವಪೂರ್ಣ ಒಪ್ಪಂದ ಮಾಡಿಕೊಂಡು 52 ವರ್ಷಗಳ ಯುದ್ಧವನ್ನು ಕೊನೆಗೊಳಿಸಿ ಶಾಂತಿಯನ್ನು ಸ್ಥಾಪನೆ ಮಾಡಿದ ಕಾರಣಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಿಲಾಗಿದೆ. ಪ್ರಶಸ್ತಿಯು ಫಲಕದೊಂದಿಗೆ 9,30,000 ಲಕ್ಷ ಅಮೆರಿಕನ್ ಡಾಲರ್ ನಗದು ಕೂಡ ನೀಡಲಾಗುತ್ತದೆ.