ಮುಂಬೈ (ಆ. 20): ಸಾಲದ ಹೊರೆಯನ್ನು ತಗ್ಗಿಸಲು ತಂಪುಪಾನೀಯ ಕ್ಷೇತ್ರದ ಅಂತಾರಾಷ್ಟ್ರೀಯ ಕಂಪನಿ ಕೋಕಾ ಕೋಲಾಗೆ ಕೆಫೆ ಕಾಫಿ ಡೇ ಷೇರುಗಳನ್ನು ಮಾರಾಟ ಮಾಡುವ ಸಂಬಂಧ ಕಾಫಿ ಡೇ ಕಂಪನಿ ಮಾತುಕತೆಯನ್ನು ಪುನಾರಂಭಿಸುವ ಸಾಧ್ಯತೆ ಇದೆ.

20 ದಿನದ ನಂತರ ಕಾಫಿ ಡೇ ಷೇರು ಶೇ. 5 ರಷ್ಟು ಏರಿಕೆ.. ಎರಡು ಕಾರಣ

ಸಿದ್ಧಾರ್ಥ ಅವರು ನಿಗೂಢವಾಗಿ ಸಾವಿಗೀಡಾಗುವ ಮುನ್ನ ಅಂದರೆ ಜೂನ್‌ನಲ್ಲಿ ಕೋಕಾ ಕೋಲಾ ಜತೆ ಮಾತುಕತೆಯನ್ನು ಆರಂಭಿಸಿದ್ದರು. ಕಂಪನಿಯ ಮಾಲೀಕತ್ವವನ್ನು ತಮ್ಮ ಬಳಿಯೇ ಇಟ್ಟುಕೊಂಡು ಕೋಕಾ ಕೋಲಾಗೆ ಒಂದಿಷ್ಟುಷೇರು ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಸಾಲ ಮರುಪಾವತಿಸುವ ಯೋಜನೆ ಅವರದ್ದಾಗಿತ್ತು. ಆದರೆ ಅಲ್ಪಪ್ರಮಾಣದ ಷೇರುಗಳ ಬದಲಿಗೆ ಮಾಲೀಕತ್ವದ ಮೇಲೆಯೇ ಕೋಕಾ ಕೋಲಾ ಕಣ್ಣಿಟ್ಟಿದ್ದರಿಂದ ಮಾತುಕತೆ ನಿಂತುಹೋಗಿತ್ತು.

4900 ಕೋಟಿಯಿಂದ ಒಂದೇ ಸಾರಿ ಸಾವಿರ ಕೋಟಿಗೆ ಇಳಿದ ಕಾಫಿ ಡೇ ಸಾಲ..ಕಾರಣ

ಸಿದ್ಧಾರ್ಥ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಕೆಫೆ ಕಾಫಿ ಡೇ ಮತ್ತೊಮ್ಮೆ ಕೋಕಾ ಕೋಲಾ ಜತೆ ಮಾತುಕತೆ ಪುನಾರಂಭಿಸುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಗ್ಲೋಬಲ್‌ ವಿಲೇಜ್‌ ಟೆಕ್‌ ಪಾರ್ಕ್ ಅನ್ನು ಬ್ಲಾಕ್‌ಸ್ಟೋನ್‌ ಗ್ರೂಪ್‌ಗೆ ಕಾಫಿ ಡೇ 3000 ಕೋಟಿ ರು.ಗೆ ಮಾರಾಟ ಮಾಡಿತ್ತು. ಇದರ ಜತೆಗೆ ಸಿದ್ಧಾರ್ಥ ಅವರು ಸ್ಥಾಪಿಸಿದ್ದ ಸರಕು ಸಾಗಣೆ ಕಂಪನಿ ಸಿಕಲ್‌ ಲಾಜಿಸ್ಟಿಕ್‌ನ ಕೆಲವೊಂದು ಆಸ್ತಿಗಳನ್ನೂ ಮಾರಾಟ ಮಾಡಲು ಕಾಫಿ ಡೇ ಪರಿಶೀಲಿಸುತ್ತಿದೆ ಎಂದು ಹೇಳಲಾಗಿದೆ.