ಕಳೆದ ಆಕ್ಟೋಬರ್ 7 ರಂದು ನಾಪತ್ತೆಯಾಗಿದ್ದರು, ಆದರೆ ಅಕ್ಟೋಬರ್ 8ರಂದು ಸವಳಂಗ ಸಮೀಪದ ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿಕಾರಿಪುರ ಸಾಲೂರಿನ ಗ್ರಾಮದವರಾದ ಬಸವರಾಜಪ್ಪ ಶಿವಮೊಗ್ಗದ ವನಿತಾ ವಿದ್ಯಾಲಯದ ಮುಖ್ಯಶಿಕ್ಷಕರಾಗಿದ್ದರು. ಅದೇ ಶಾಲೆಯಲ್ಲೇ ಚನ್ನಬಸಪ್ಪ, ಚನ್ನಪ್ಪ ಹಾಗೂ ನಾಗರಾಜಪ್ಪ ಸಹಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದರು. ಮುಖ್ಯಶಿಕ್ಷಕ ಹಾಗು ಸಹಶಿಕ್ಷಕರ ನಡುವೆ ಎಲ್ ಐ ಸಿ, ಆರ್ ಡಿ ಹಣ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಹಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಸಹ ಶಿಕ್ಷಕರು 6 ಆರು ಲಕ್ಷ ರೂಗಳನ್ನು ಬಸವರಾಜಪ್ಪನ ಖಾತೆಗೆ ಜಮಾ ಮಾಡಿದ್ದರು. ಆದರೆ ಬಸವರಾಜಪ್ಪ ಈ ಹಣವನ್ನು ಬಳಕೆ ಮಾಡಿಕೊಂಡಿದ್ದು, ಹಣ ಕೊಡುವಂತೆ ಸಹಶಿಕ್ಷಕರು ಗಲಾಟೆ ಮಾಡಿದ್ದರು. ಅಕ್ಟೋಬರ್ 7ರಂದು  ಶಿಕಾರಿಪುರ ಬ್ಯಾಂಕ್ ನಲ್ಲಿ ಸಾಲ ಬರುವುದಿದೆ ಎಂದು ನಾಲ್ವರು ಬೈಕ್ ಮೇಲೆ ತೆರಳಿತ್ತಿದ್ದರು. ಈ  ಸಂದರ್ಭದಲ್ಲಿ ಬಸವರಾಜಪ್ಪ ಸಾಲದ ವಿಚಾರವಾಗಿ ಸುಳ್ಳು ಹೇಳುತ್ತಿದ್ದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸಹಶಿಕ್ಷಕರು ಬಸವರಾಜಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿ ಬಸವರಾಜಪ್ಪನನ್ನ ಮರಕ್ಕೆ ನೇಣು ಹಾಕಿದ ಸಹಶಿಕ್ಷಕರು ಅಲ್ಲಿಂದ ಪರಾರಿಯಾಗಿದ್ದರು.

ದಾವಣಗೆರೆ(ಅ.15): ಅವರೆಲ್ಲಾ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದ್ರೆ ಹಣಕಾಸಿನ ವಿಚಾರದಲ್ಲಿ ಉಂಟಾದ ಗೊಂದಲದಲ್ಲಿ ಮುಖ್ಯಶಿಕ್ಷಕರನ್ನೇ ಕೊಲೆ ಮಾಡಿದ್ದಾರೆ. ಶಿವಮೊಗ್ಗದ ವನಿತಾ ವಿದ್ಯಾಲಯದ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಬಸವರಾಜಪ್ಪ ಕೊಲೆಯಾದ ದುರ್ಧೈವಿ.

Add Asianetnews Kannada as a Preferred SourcegooglePreferred

ಕಳೆದ ಆಕ್ಟೋಬರ್ 7 ರಂದು ನಾಪತ್ತೆಯಾಗಿದ್ದರು, ಆದರೆ ಅಕ್ಟೋಬರ್ 8ರಂದು ಸವಳಂಗ ಸಮೀಪದ ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿಕಾರಿಪುರ ಸಾಲೂರಿನ ಗ್ರಾಮದವರಾದ ಬಸವರಾಜಪ್ಪ ಶಿವಮೊಗ್ಗದ ವನಿತಾ ವಿದ್ಯಾಲಯದ ಮುಖ್ಯಶಿಕ್ಷಕರಾಗಿದ್ದರು. ಅದೇ ಶಾಲೆಯಲ್ಲೇ ಚನ್ನಬಸಪ್ಪ, ಚನ್ನಪ್ಪ ಹಾಗೂ ನಾಗರಾಜಪ್ಪ ಸಹಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದರು. ಮುಖ್ಯಶಿಕ್ಷಕ ಹಾಗು ಸಹಶಿಕ್ಷಕರ ನಡುವೆ ಎಲ್ ಐ ಸಿ, ಆರ್ ಡಿ ಹಣ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಹಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಸಹ ಶಿಕ್ಷಕರು 6 ಆರು ಲಕ್ಷ ರೂಗಳನ್ನು ಬಸವರಾಜಪ್ಪನ ಖಾತೆಗೆ ಜಮಾ ಮಾಡಿದ್ದರು. ಆದರೆ ಬಸವರಾಜಪ್ಪ ಈ ಹಣವನ್ನು ಬಳಕೆ ಮಾಡಿಕೊಂಡಿದ್ದು, ಹಣ ಕೊಡುವಂತೆ ಸಹಶಿಕ್ಷಕರು ಗಲಾಟೆ ಮಾಡಿದ್ದರು.

ಅಕ್ಟೋಬರ್ 7ರಂದು ಶಿಕಾರಿಪುರ ಬ್ಯಾಂಕ್ ನಲ್ಲಿ ಸಾಲ ಬರುವುದಿದೆ ಎಂದು ನಾಲ್ವರು ಬೈಕ್ ಮೇಲೆ ತೆರಳಿತ್ತಿದ್ದರು. ಈ ಸಂದರ್ಭದಲ್ಲಿ ಬಸವರಾಜಪ್ಪ ಸಾಲದ ವಿಚಾರವಾಗಿ ಸುಳ್ಳು ಹೇಳುತ್ತಿದ್ದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸಹಶಿಕ್ಷಕರು ಬಸವರಾಜಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿ ಬಸವರಾಜಪ್ಪನನ್ನ ಮರಕ್ಕೆ ನೇಣು ಹಾಕಿದ ಸಹಶಿಕ್ಷಕರು ಅಲ್ಲಿಂದ ಪರಾರಿಯಾಗಿದ್ದರು.

ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಸಹಶಿಕ್ಷಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.