ಸಚಿವ ಸಂಪುಟದ ವಿಸ್ತರಣೆಯೇ ಆಗಿಲ್ಲ. ಆದಾಗ್ಯೂ ಗೃಹ ಖಾತೆಯನ್ನು ಯಾರಿಗೆ ಕೊಡಬೇಕು? ರಮಾನಾಥ್ ರೈ ನಿಮ್ಮ ಬಳಿ ತಾವೇ ಗೃಹ ಸಚಿವರೆಂದು ಹೇಳಿದ್ದಾರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳನ್ನು ಖಾರವಾಗಿ ಪ್ರಶ್ನಿಸಿದರು.

ಬೆಂಗಳೂರು(ಜು.27): ಸಚಿವ ಸಂಪುಟದ ವಿಸ್ತರಣೆಯೇ ಆಗಿಲ್ಲ. ಆದಾಗ್ಯೂ ಗೃಹ ಖಾತೆಯನ್ನು ಯಾರಿಗೆ ಕೊಡಬೇಕು? ರಮಾನಾಥ್ ರೈ ನಿಮ್ಮ ಬಳಿ ತಾವೇ ಗೃಹ ಸಚಿವರೆಂದು ಹೇಳಿದ್ದಾರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳನ್ನು ಖಾರವಾಗಿ ಪ್ರಶ್ನಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ಮೂರು ಹುದ್ದೆ ಖಾಲಿ ಇವೆ. ಹೈಕಮಾಂಡ್ ಜತೆ ಚರ್ಚಿಸಿ ಶೀಘ್ರ ವಿಸ್ತರಣೆ ಮಾಡಲಾಗುತ್ತದೆ. ಅದಾದ ಬಳಿಕವಷ್ಟೇ ಗೃಹ ಸಚಿವ ಸ್ಥಾನವನ್ನು ಯಾರಿಗೆ ಕೊಡಬೇಕೆಂಬುದು ನಿರ್ಧಾರವಾಗುತ್ತದೆತ್ತದೆ. ಅರಣ್ಯ ಸಚಿವ ರಮಾನಾಥ್ ರೈ ಅವರಿಗೆ ಗೃಹ ಖಾತೆ ಕೊಡುತ್ತಾರೆ ಎಂದು ಮಾಧ್ಯಮಗಳೇ ಸ್ವಯಂಪ್ರೇರಿತ ವರದಿ ಮಾಡುತ್ತಿವೆ. ನಾನು ಆ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಸ್ಪಷ್ಪಪಡಿಸಿದರು.

ಜವಾಬ್ದಾರಿ ಹೊರಲು ಸಿದ್ಧ- ರೈ:

ಆದರೆ, ಸಚಿವ ಸಂಪುಟ ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ರಮಾನಾಥ್ ರೈ ಅವರು, ಪಕ್ಷದ ಹೈಕಮಾಂಡ್ ಹಾಗೂ ಮುಖ್ಯ ಮಂತ್ರಿಗಳು ಯಾವುದೇ ಜವಾಬ್ದಾರಿ ಕೊಟ್ಟರೂ ನಾನು ನಿ‘ಾಯಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಖಾಸಗಿಯಾಗಿ ನನ್ನ ಜತೆ ಚರ್ಚಿಸಿದ್ದಾರೆ ಎಂದು ಹೇಳಿದರು.