ಇದೇ ಅಕ್ಟೋಬರ್ 5  ರಂದು ಶಾಸಕರ ಭವನದ ಎದುರು ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ತಪೋವನ ಲೋಕಾರ್ಪಣೆ ಮಾಡಲಿದ್ದಾರೆ.  

ಬೆಂಗಳೂರು (ಸೆ.28): ಇದೇ ಅಕ್ಟೋಬರ್ 5 ರಂದು ಶಾಸಕರ ಭವನದ ಎದುರು ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ತಪೋವನ ಲೋಕಾರ್ಪಣೆ ಮಾಡಲಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಈ ವಿಚಾರ ತಿಳಿಸಿದ ಸಚಿವ ಆಂಜನೇಯ, ಅಂದೇ ವಿಧಾನಸೌಧದ ಮುಂಭಾಗದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ನಡೆಯಲಿದೆ ಎಂದೂ ಹೇಳಿದರು. ಇನ್ನು, ಅಕ್ಟೋಬರ್ 1 ರಂದು ಹರಿಹರದಲ್ಲಿ ಬಿ. ಕೃಷ್ಣಪ್ಪ ಭವನ ಲೋಕಾರ್ಪಣೆಯಾಗಲಿದ್ದು, ಸಿಎಂ ಸಿದ್ದರಾಮಯ್ಯನವರೇ ಈ ಭವನ ಲೋಕಾರ್ಪಣೆ ಮಾಡಲಿದ್ದಾರೆ ಅಂತ ಸಚಿವರು ತಿಳಿಸಿದರು. ಅ.8 ರಂದು ಸಿಎಂ ಸಿದ್ದರಾಮಯ್ಯ ಭೋವಿ ಅಭಿವೃದ್ಧಿ ನಿಗಮವನ್ನೂ ಲೋಕಾರ್ಪಣೆ ಮಾಡಲಿದ್ದಾರೆ ಅಂತ ಆಂಜನೇಯ ಹೇಳಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಇಂದು ಬೌದ್ಧ ಧರ್ಮ ಸ್ವೀಕರಿಸಿದ ದಿನವಾದ ಹಿನ್ನಲೆಯಲ್ಲಿ ನಾಗಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ 500 ಜನರನ್ನು 10 ಬಸ್​ಗಳಲ್ಲಿ ಕಳಿಸಿರೋದಾಗಿಯೂ ಸಚಿವರು ಮಾಹಿತಿ ನೀಡಿದರು.