ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.   ಸುರತ್ಕಲ್'ನ ಕಾಟಿಪಳ್ಳದ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದು,   ದೀಪಕ್ ತಾಯಿ ಹಾಗೂ ಕುಟುಂಬದ ಸದಸ್ಯರಿಗೆ  ಸಿಎಂ ಸಾಂತ್ವನ ಹೇಳಿದ್ದಾರೆ.  ಸಿಎಂ ಭೇಟಿ‌ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಒದಗಿಸಲಾಗಿತ್ತು.  

ಮಂಗಳೂರು (ಜ.07): ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಸುರತ್ಕಲ್'ನ ಕಾಟಿಪಳ್ಳದ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದು, ದೀಪಕ್ ತಾಯಿ ಹಾಗೂ ಕುಟುಂಬದ ಸದಸ್ಯರಿಗೆ ಸಿಎಂ ಸಾಂತ್ವನ ಹೇಳಿದ್ದಾರೆ. ಸಿಎಂ ಭೇಟಿ‌ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಒದಗಿಸಲಾಗಿತ್ತು.

ದೀಪಕ್ ಸಹೋದರ ಸತೀಶ್'ಗೆ ಎಂಆರ್'ಪಿಎಲ್'ನಲ್ಲಿ ಕೆಲಸ ಕೊಡಿಸಲು ಡಿಸಿ ಸಸಿಕಾಂತ್ ಸೆಂಥಿಲ್'ಗೆ ಸೂಚನೆ ನೀಡಿದ್ದಾರೆ. ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ದೀಪಕ್ ಮನೆ ಭೇಟಿ ಬಳಿಕ ಬಶೀರ್ ಮನೆಗೂ ಸಿಎಂ ಭೇಟಿ ನೀಡಿದ್ದಾರೆ. ಆಕಾಶ್ ಭವನದಲ್ಲಿರೋ ಬಶೀರ್ ನಿವಾಸಕ್ಕೆ ತೆರಳಿ ಬಶೀರ್​ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.