ಮೈಸೂರು(ಸ.06): ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂದಿತರಾಗಿದ್ದ ಮರಿಗೌಡ, ಇಂದು ಮೈಸೂರಿನಲ್ಲಿ ಸಿಎಂ ಜೊತೆ ಕಾಣಿಸಿಕೊಂಡಿದ್ದಾರೆ. ಆದರೆ ಆಪ್ತ ಮರಿಗೌಡನನ್ನು ಮಾತ್ರ ಸಿಎಂ ಸಿದ್ರಾಮಯ್ಯ ಖ್ಯಾರೆ ಅನ್ನಲಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವರುಣಾ ವಿಧಾನಸಭಾ ಕ್ಷೇತ್ರ ಪ್ರವಾಸದಲ್ಲಿರುವ ಸಿಎಂ ಇಂದು ಮೈಸೂರಿಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಾಗನಿಂದಲೂ ಹಿಂದೆಯೇ ಹೋದ ಮರಿಗೌಡನನ್ನು ಹತ್ತಿರ ಕರೆದುಕೊಳ್ಳಲು ಮಾತ್ರ ಸಿಎಂ ಮನಸ್ಸು ಮಾಡಿಲ್ಲ. ವರುಣಾ ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿಸಲು ಪ್ರಯತ್ನಿಸಿದರೂ ತಿರುಗಿ ನೋಡದ ಸಿಎಂ ಆಪ್ತ ಮರಿಗೌಡನನ್ನು ದೂರವಿಟ್ಟ ಪ್ರಸಂಗ ನಡೆಯಿತು.

ಜಿಲ್ಲಾಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೈಲು ಸೇರಿದ್ದ ಮರಿಗೌಡನನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಲಾಗಿದೆ.