ಚಿಕ್ಕಲಟ್ಟನಹಳ್ಳಿ ಗ್ರಾಮದ ಕಮಲಮ್ಮ ಮಗ ತೀರಿಕೊಂಡಿರುವ ಕಾರಣ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದರು. ಆದರೆ, ಈಗ ನಾನು ಯಾರಿಗೂ ಹಣ ಕೊಡಕ್ಕಾಗಲ್ಲಮ್ಮಾ, ಮೋದಿ  ಎಲ್ಲ ಕಡೆ ಬೀಗ ಹಾಕಿಬಿಟ್ಟಿದ್ದಾರೆ, ಬಸ್ ಚಾರ್ಜ್​ ಕೊಡುತ್ತೇನೆ, ಊರಿಗೆ ಹೋಗಿ ಅಂತ ಸಿಎಂ ಅಂದಿದ್ದಕ್ಕೆ ಬೇಸರಗೊಂಡ ಕಮಲಮ್ಮ ಕಣ್ಣೀರು ಹಾಕುತ್ತಾ  ಹೊರನಡೆದರು.

ಬೆಂಗಳೂರು(ಡಿ.15): ಕೇಂದ್ರ ಸರ್ಕಾರದ ನೋಟ್​ ಬ್ಯಾನ್​ ನಿರ್ಧಾರದ ಬಿಸಿ ತಮಗೂ ತಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಬಹಿರಂಗವಾಗಿ ತೋರ್ಪಡಿಸಿಕೊಂಡಿದ್ದಾರೆ. ಸಿಎಂ ಗೃಹ ಕಚೇರಿಯಲ್ಲಿ ಇಂದು ವರುಣಾದಿಂದ ಹಣಕಾಸಿನ ನೆರವು ಕೇಳಿ ಬಂದಿದ್ದ ಮಹಿಳೆಯೊಬ್ಬರಿಗೆ ಇದೇ ಕಾರಣ ನೀಡಿ ನೆರವು ನೀಡಲು ಸಿದ್ಧರಾಮಯ್ಯ ನಿರಾಕರಿಸಿದರು.