‘ಅಂತರ್ಜಾತಿ ವಿವಾಹ ಅಥವಾ ಮತಾಂತರ ಆದರೂ ಹುಟ್ಟಿದ ಜನ್ಮ ಬದಲಾಗುವುದಿಲ್ಲ’ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಜಾಟ್‌ ಸಮುದಾಯದ ವ್ಯಕ್ತಿ ಮದುವೆಯಾಗಿರುವ ಪರಿಶಿಷ್ಟ ಮಹಿಳೆ ತನ್ನ ಜಾತಿಯ ಆಧಾರದಲ್ಲಿ ದೌರ್ಜನ್ಯವಾಗುತ್ತಿದೆ ಎಂದು ನೀಡಿದ್ದ ದೂರಿನ ವಿಚಾರಣೆ ವೇಳೆ ಕೋರ್ಟ್‌ ಹೀಗೆ ಹೇಳಿದೆ.

ಪ್ರಯಾಗರಾಜ್‌: ‘ಅಂತರ್ಜಾತಿ ವಿವಾಹ ಅಥವಾ ಮತಾಂತರ ಆದರೂ ಹುಟ್ಟಿದ ಜನ್ಮ ಬದಲಾಗುವುದಿಲ್ಲ’ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಜಾಟ್‌ ಸಮುದಾಯದ ವ್ಯಕ್ತಿಯನ್ನು ಮದುವೆಯಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬಳು, ತನ್ನ ಜಾತಿಯ ಆಧಾರದಲ್ಲಿ ದೌರ್ಜನ್ಯವಾಗುತ್ತಿದೆ ಎಂದು ನೀಡಿದ್ದ ದೂರಿನ ವಿಚಾರಣೆ ವೇಳೆ ಕೋರ್ಟ್‌ ಹೀಗೆ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಕರಣವೇನು?:

‘ಪರಿಶಿಷ್ಟ ಜಾತಿಯವಳಾದ ನನ್ನ ಮೇಲೆ ದಿನೇಶ್‌ ಸೇರಿದಂತೆ 9 ಮಂದಿ ದೌರ್ಜನ್ಯವೆಸಗಿದ್ದು, ಜಾತಿಯ ಆಧಾರದಲ್ಲಿ ಕಟುವಾಗಿ ನಿಂದಿಸಿದ್ದರು ಹಾಗೂ ನನ್ನನ್ನೂ ಸೇರಿ 3 ಮಂದಿಗೆ ಗಾಯಗೊಂಡಿದ್ದೆವು’ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲೀಗಢದ ವಿಶೇಷ ಜಡ್ಜ್‌, ಆರೋಪಿಗಳಿಗೆ 2022ರ ಜು.27ರಂದು ಸಮನ್ಸ್‌ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ದಿನೇಶ್‌ ಅಲಹಾಬಾದ್‌ ಕೋರ್ಟ್‌ ಮೆಟ್ಟಿಲೇರಿದ್ದು, ‘ಮಹಿಳೆ ವಿವಾಹವಾದ ಮೇಲೆ ಆಕೆ ತನ್ನ ಪತಿಯ ಜಾತಿಗೆ ಸೇರುತ್ತಾಳೆ’ ಎಂದು ವಾದಿಸಿದ್ದರು.

ಹುಟ್ಟಿದ ಜಾತಿಯಲ್ಲಿ ಬದಲಾವಣೆ ಆಗುವುದಿಲ್ಲ

ಇದನ್ನು ಅಲ್ಲಗಳೆದಿರುವ ನ್ಯಾ। ಅನಿಲ್‌ ಕುಮಾರ್‌ ಅವರ ಪೀಠ, ‘ಮದುವೆಯಾದ ಅಥವಾ ಮತಾಂತರವಾದ ಮಾತ್ರಕ್ಕೆ ಹುಟ್ಟಿದ ಜಾತಿಯಲ್ಲಿ ಬದಲಾವಣೆ ಆಗುವುದಿಲ್ಲ’ ಎಂದು ಹೇಳಿದೆ.