ಸರ್ವಾಧಿಕಾರಿ ವ್ಯವಸ್ಥೆ ಇದೆಯಾ ನಮ್ಮ ದೇಶದಲ್ಲಿ..? ಹಿಟ್ಲರ್ ಸಂಸ್ಕೃತಿನಾ ಇದು? ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದೇ ರೀತಿಯಲ್ಲಿ ಮತ್ತೆ ಏನಾದರೂ ಮಾಡಿದರೆ ಇಡೀ ದೇಶಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ. ಈ ಸರಕಾರಕ್ಕೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ.,.

ಬೆಂಗಳೂರು(ಆ. 05): ಡಿಕೆಶಿ ಮೇಲೆ ನಡೆದ ಐಟಿ ರೇಡ್ ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ಇದರ ಪರಿಣಾಮವನ್ನು ಕೇಂದ್ರ ಸರಕಾರ ಎದುರಿಸಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರಕಾರದ್ದು ಸರ್ವಾಧಿಕಾರಿ ಧೋರಣೆ ಮತ್ತು ಹಿಟ್ಲರ್ ಸಂಸ್ಕೃತಿ ಎಂದು ಬಣ್ಣಿಸಿದ್ದಾರೆ. ಮಾಧ್ಯಮಗಳೊಂದಿಗೆ ಶನಿವಾರ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಮತ್ತೊಮ್ಮೆ ಇಂಥದ್ದು ನಡೆದರೆ ದೇಶಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ. ಶಿವಕುಮಾರ್ ಅವರ ಮುಂದಿನ ನಡೆ ಬಗ್ಗೆ ಮಾತನಾಡಿದ ಸಿಎಂ, ಕಾನೂನಾತ್ಮಕವಾಗಿ ಶಿವಕುಮಾರ್ ಹೋರಾಟ ಮಾಡುತ್ತಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?
"ಸರ್ವಾಧಿಕಾರಿ ವ್ಯವಸ್ಥೆ ಇದೆಯಾ ನಮ್ಮ ದೇಶದಲ್ಲಿ..? ಹಿಟ್ಲರ್ ಸಂಸ್ಕೃತಿನಾ ಇದು? ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದೇ ರೀತಿಯಲ್ಲಿ ಮತ್ತೆ ಏನಾದರೂ ಮಾಡಿದರೆ ಇಡೀ ದೇಶಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ. ಈ ಸರಕಾರಕ್ಕೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ.,..

"ಐಟಿ ರೇಡ್ ವಿಚಾರದಲ್ಲಿ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡ್ತೇವೆ. ಶಿವಕುಮಾರ್'ಗೆ ಕಾನೂನು ರೀತಿ ಹೋರಾಟ ಮಾಡೋದು ಗೊತ್ತಿಲ್ವಾ? ಗೊತ್ತಿದೆ. ಅವರು ಕಾನೂನಾತ್ಮಕವಾಗಿ ಹೋರಾಟ ಮಾಡ್ತಾರೆ. ಇದು ರಾಜಕೀಯ ಪ್ರೇರಿತವಾಗಿ ನಡೆದಿದೆ. ಇದು ಯಾರ ಮನೆಯಲ್ಲಿ ಬೇಕಾದರೂ ಸರ್ಚ್ ಮಾಡಬಹುದು..." ಎಂದು ಸಿದ್ದರಾಮಯ್ಯ ಹೇಳಿದ್ದಾರೆ.