12 ವರ್ಷದ ಸೇಡು: ಜನಾರ್ದನ ರೆಡ್ಡಿ ಮಾತಿಗೆ ಕುಮಾರಸ್ವಾಮಿ ತಿರುಗೇಟು

ಸಿಎಂ ಕುಮಾರಸ್ವಾಮಿ ಅವರು ನನ್ನ ವಿರುದ್ಧ ಸೇಡಿನ  ರಾಜಕಾರಣ ಮಾಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳಿಕೆಗೆ ಇದೀಗ ಸ್ವತಃ  ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. 

CM Kumaraswamy denied Janardhan Reddy s indulging in vendetta politics statement against him

ಬೀದರ್, [ನ.15]: ಜನಾರ್ದನ ರೆಡ್ಡಿ ವಿರುದ್ಧ ನಾನು ಯಾವುದೇ ಕಾರಣಕ್ಕೂ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಸೇಡಿನ ರಾಜಕೀಯ ಮಾಡೋದಿದ್ರೆ ಈ ಹಿಂದೆ ಸಿಎಂ ಆದಾಗಲೇ ಆ ಕೆಲಸಕ್ಕೆ ಕೈ ಹಾಕುತ್ತಿದ್ದೆ ಎಂದು ಸಿಎಂ ಎಚ್. ಡಿ. ಕುಮಾರಸ್ವಾಮಿ, ರೆಡ್ಡಿಗೆ  ತಿರುಗೇಟು ನೀಡಿದ್ದಾರೆ. 

ಗಡಿ ನಾಡು ಬೀದರ್ ನಲ್ಲಿ ಇಂದು [ಗುರುವಾರ] ಮಾತನಾಡಿದ ಅವರು, ಜನಾರ್ದನ ರೆಡ್ಡಿ ವಿರುದ್ಧ ನಾನ್ಯಾಕೆ ಸೇಡಿನ ರಾಜಕಾರಣ ಮಾಡಲಿ ? ಒಂದು ವೇಳೆ ಸೇಡಿನ ರಾಜಕಾರಣ ಮಾಡುವುದಾಗಿದ್ರೆ ಈ ಹಿಂದೆ ಸಿಎಂ ಇದ್ದಾಗಲೇ ಮಾಡುತ್ತಿದ್ದೆ. ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಈ ಬಗ್ಗೆ ಪ್ರಶ್ನೆ ಕೇಳಬೇಡಿ. ಅಂತಹ ವ್ಯಕ್ತಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದರಲ್ಲಿ ಅರ್ಥ ಇಲ್ಲ. ಆ ಮಟ್ಟಕ್ಕೆ ನಾನು ಇಳಿಯಲಾರೆ ಎಂದರು.

12 ವರ್ಷದ ಸೇಡು ತೀರಿಸಿಕೊಂಡ್ರು ಕುಮಾರಸ್ವಾಮಿ: ಜೈಲಿನಿಂದ ಹೊರಬಂದ ರೆಡ್ಡಿ ಕಿಡಿ

ಆಂಬಿಡೆಂಟ್ ಪ್ರಕರಣದಲ್ಲಿ ಹಿರಿಯ ಅಧಿಕಾರಿಯೊಬ್ಬರು ಶಾಮಿಲಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಎಂತಹ ಬಲಾಡ್ಯ ಅಧಿಕಾರಿಗಳೇ ಇರಲಿ. ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸ್ವತಂತ್ರವಿದೆ. ಸ್ವತಂತ್ರವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮುಕ್ತ ಅವಕಾಶ ಕೊಟ್ಟಿದ್ದೇನೆ ಎಂದು ಹೇಳಿದರು. 

18 ಕೋಟಿ ರೂಪಾಯಿ ತೆಗೆದುಕೊಂಡಿದ್ದು ನಿಜ ಎಂದು ಅವರೇ ಕೋರ್ಟ್ ಗೆ ಅಫಿಡವಿಟ್ ಕೊಟ್ಟಿದ್ದಾರೆ. ಈಗ ವಾಪಸ್ ಕೊಡುವುದಾಗಿ ಹೇಳುತ್ತಿದ್ದಾರೆ. ಯಾರಾದರೂ ಕಳ್ಳರು ಕಳ್ಳತನ ಮಾಡಿ ವಾಪಸ್ ಕೊಡುತ್ತೇನೆ ಎಂದರೆ ಹೇಗೆ ? ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios