ಮೈಸೂರು: ‘ನಿನ್ನಿಂದಲೇ ಇದೆಲ್ಲಾ ಆಗಿದ್ದು, ಹಾಗಾಗಿ ನಾನು ಮಾತನಾಡಬೇಕಾಯಿತು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವ ಜಿ.ಟಿ. ದೇವೇಗೌಡ ಅವರಿಗೆ ನೇರವಾಗಿ ಹೇಳಿದ ಪ್ರಸಂಗ ಮೈಸೂರಿನಲ್ಲಿ ಭಾನುವಾರ ನಡೆಯಿತು. 

ಮೈಸೂರಿನ ಕಲಾಮಂದಿರದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರ ‘ಸಮುದಾಯ ನಾಯಕರು’, ‘ಸಮಾಜಮುಖಿ ಶ್ರೀಸಾಮಾನ್ಯರು’ ಕೃತಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ, ನಿನ್ನೆ ಮೈಸೂರಿಗೆ ಬಂದು ಉಳಿದುಕೊಂಡಿದ್ದೆ. ಬಸವರಾಜ ಹೊರಟ್ಟಿಏನೋ ಮಾತನಾಡಿದ್ದಾರೆ. ಅದಕ್ಕಾಗಿ ಕುಮಾರಸ್ವಾಮಿ ಜಿಟಿಡಿ, ಸಾ.ರಾ. ಮಹೇಶ್‌, ಪುಟ್ಟರಾಜು ಅವರನ್ನು ಕರೆಸಿಕೊಂಡು ಮಾತುಕತೆ ನಡೆಸುತ್ತಿದ್ದಾರೆ ಎಂದು ಟಿವಿಗಳಲ್ಲಿ ಧಾರವಾಹಿಯಂತೆ ಪ್ರಸಾರ ಮಾಡಿದರು ಎಂದರು. 

ಅಲ್ಲೇ ವೇದಿಕೆಯಲ್ಲಿ ಕುಳಿತಿದ್ದ ಸಚಿವ ಜಿ.ಟಿ. ದೇವೇಗೌಡ ಅವರ ಕಡೆಗೆ ತಿರುಗಿ, ನಿನ್ನಿಂದಲೇ ಇದೆಲ್ಲಾ ಆಗಿದ್ದು, ಹಾಗಾಗಿ ನಾನು ಮಾತನಾಡಬೇಕಾಯಿತು ಎಂದರು. ಬಳಿಕ ತಮ್ಮ ಮಾತು ಮುಂದುವರಿಸಿದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.