ದೇಶಿ ಗೆಟಪ್’ನಲ್ಲಿ ನಾಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Aug 2018, 2:39 PM IST
CM HD Kumaraswamy Does paddy Transplantation in Mandya
Highlights

'ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ. ಕಳೆದೆರಡು ದಿನಗಳ ಹಿಂದೆ ಸಾಲಮನ್ನಾದ ಅಂಗವಾಗಿ ಸಹಕಾರಿ ಬ್ಯಾಂಕಿನ ಸುಮಾರು 9.5 ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಿರುತ್ತೇವೆ. ಹಾಗೆಯೇ ಇನ್ನೊಂದು ವಾರದಲ್ಲಿ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾದ ಬಗ್ಗೆಯೂ ಘೋಷಣೆ ಮಾಡಲಿದ್ದೇನೆ' ಎಂದು ಎಚ್’ಡಿಕೆ ಹೇಳಿದರು.

ಮಂಡ್ಯ[ಆ.11]: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯ ಸೀತಾಪುರದಲ್ಲಿ ನಾಟಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಪಕ್ಕಾ ರೈತನ ಗೆಟಪ್’ನಲ್ಲಿ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡು, ಮೊದಲು ಜೋಡೆತ್ತಿಗೆ ನಮಸ್ಕರಿಸಿ ಐದು ಎಕರೆ 5 ಎಕರೆ ಗದ್ದೆಯಲ್ಲಿ ನಾಟಿ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

"

ಇದನ್ನು ಓದಿ: ಹಳ್ಳಿ ಗೆಟಪ್‌ನಲ್ಲಿ ಸಿಎಂ ಕುಮಾರಸ್ವಾಮಿ ಭತ್ತ ನಾಟಿ!

'ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ. ಕಳೆದೆರಡು ದಿನಗಳ ಹಿಂದೆ ಸಾಲಮನ್ನಾದ ಅಂಗವಾಗಿ ಸಹಕಾರಿ ಬ್ಯಾಂಕಿನ ಸುಮಾರು 9.5 ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಿರುತ್ತೇವೆ. ಹಾಗೆಯೇ ಇನ್ನೊಂದು ವಾರದಲ್ಲಿ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾದ ಬಗ್ಗೆಯೂ ಘೋಷಣೆ ಮಾಡಲಿದ್ದೇನೆ' ಎಂದು ಹೇಳಿದರು.

ಇದನ್ನು ಓದಿ: ಗಣೇಶ ಹಬ್ಬಕ್ಕೆ ರೈತರಿಗೆ ಮತ್ತೊಂದು ಸೂಪರ್ ಬಂಪರ್ ಕೊಡುಗೆ

ರಾಜ್ಯದ 30 ಜಿಲ್ಲೆಗಳಿಗೂ ತಿಂಗಳಿಗೆ ಒಂದು ದಿನ ಭೇಟಿ ಮಾಡಿ ರೈತರೊಂದಿಗೆ ಕಳೆಯುವ ನಿರ್ಧಾರ ಮಾಡಿದ್ದೇನೆ. ಜತೆಗೆ ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇನೆ. ಯಾವ ರೈತರೂ ಆತ್ಮಹತ್ಯೆ ಮಾಡಬಾರದು. ನಿಮ್ಮನ್ನು ಉಳಿಸಿಕೊಳ್ಳುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. 
 

loader