ಉತ್ತಮ ಬಜೆಟ್ ಗಾಗಿ ಸಿಎಂಗೇ ಗುಲ್ಬರ್ಗಾ ವಿವಿ ಚಿನ್ನದ ಪದಕ ನೀಡಲು ಮುಂದಾಯ್ತು.

ಕಲಬುರಗಿ(ಮಾ.19): ದುಬಾರಿ ವಾಚ್ ಗಿಫ್ಟ್ ಪಡೆದು ಸಂಕಷ್ಟಕ್ಕೆ ಸಿಲುಕಿದ್ದ ಸಿಎಂ ಸಿದ್ದರಾಮಯ್ಯ ಅದಾದ ಬಳಿಕ ಪಾಠ ಕಲಿತಿದ್ದಾರೆ. ಈಗ ಯಾರೇ ಗಿಫ್ಟ್ ಅಂದ್ರೆ ಸಾಕು ಸಿಎಂ ದೂರ ಸರಿದು ಬಿಡ್ತಾರೆ. ಇವತ್ತು ಕಲಬುರ್ಗಿಯಲ್ಲೂ ಆಗಿದ್ದು ಇದೇ. ಉತ್ತಮ ಬಜೆಟ್ ಗಾಗಿ ಸಿಎಂಗೇ ಗುಲ್ಬರ್ಗಾ ವಿವಿ ಚಿನ್ನದ ಪದಕ ನೀಡಲು ಮುಂದಾಯ್ತು.

 ಸಚಿವ ರಾಯರೆಡ್ಡಿಯವರು ಚಿನ್ನದ ಪದಕ ನೀಡುತ್ತಲೇ ವೇದಿಕೆಯಲ್ಲಿಯೇ ಸಿಎಂ ಪದಕವನ್ನು ವಾಪಸ್​ ನೀಡಿದರು. ವಿವಿ ನೀಡಿದ ಚಿನ್ನದ ಪದಕ ಮತ್ತು ಬೆಳ್ಳಿ ಆಕಳು ಎರಡನ್ನೂ ವಾಪಸ್ ನೀಡಿದ ಸಿಎಂ ಸಿದ್ದರಾಮಯ್ಯ. ಅದನ್ನು ನೆನಪಿಗಾಗಿ ವಿವಿಯಲ್ಲೇ ಇಡುವಂತೆ ಸೂಚಿಸಿದರು.