1985ರಲ್ಲಿ ಮಾಗಡಿಯಿಂದ ಕಾಂಗ್ರೆಸ್ ಅಭ್ಯರ್ಥಿ'ಯಾಗಿ ಸ್ಪರ್ಧಿಸಿದರೂ ಜಯ ಒಲಿಯಲಿಲ್ಲ. 1989ರಲ್ಲಿ ಮೊದಲ ಬಾರಿಗೆ ಮಾಗಡಿ ಕ್ಷೇತ್ರದಿಂದ ಆಯ್ಕೆಯಾಗಿ ನಂತರ ಬಂಗಾರಪ್ಪ ಸಂಪುಟದಲ್ಲಿ ಕೃಷಿಖಾತೆ ಸಚಿವರಾಗಿದ್ದರು. 1994ರಲ್ಲಿ ಮಾಗಡಿಯಿಂದ 2008ರಲ್ಲಿ ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸಿದರೂ ಜಯ ಒಲಿಯಲಿಲ್ಲ. 19999ರಲ್ಲಿ ಮಾಗಡಿಯಿಂದ ಗೆದ್ದು ಕೃಷ್ಣ ಸಂಪುಟದಲ್ಲಿ ಸಚಿವ ರಾಗಿದ್ದರು. 2014ರ ಜೂನ್‌ನಲ್ಲಿ ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾದರು. ಕುರುಬ ಸಮುದಾಯದವರು. ಸಿಎಂ ಆಪ್ತವಲಯದಲ್ಲಿ ಗುರುತಿಸಿಕೊಂಡಿದಿದ್ದಾರೆ.

ಬೆಂಗಳೂರು(ಸೆ.01): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ 6ನೇ ಸಂಪುಟ ವಿಸ್ತರಣೆಯಾಗಿದ್ದು, ಶಾಸಕಿ ಗೀತಾ ಮಹದೇವ ಪ್ರಸಾದ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಹೆಚ್.ಎಂ.ರೇವಣ್ಣ ಹಾಗೂ ಆರ್.ಬಿ. ತಿಮ್ಮಾಪುರ ಅವರು ರಾಜ ಭವನದಲ್ಲಿ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀರು.

ರಾಜ್ಯಪಾಲ ವಜುಬಾಯಿ ವಾಲ ಅವರು ಮೂವರಿಗೂ ಪ್ರಮಾಣ ವಚನ ಬೋಧಿಸಿದರು. ಮೂರೂ ಜನ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಮಂದಿ ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಗೀತಾ ಮಹದೇವ ಪ್ರಸಾದ್

5 ಬಾರಿ ಆಯ್ಕೆಯಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರ ನಿಧನ'ದಿಂದ ತೆರವಾದ ಗುಂಡ್ಲುಪೇಟೆ ಕ್ಷೇತ್ರದಿಂದ ಆಯ್ಕೆಯಾದ ಗೀತಾ ಅವರು ಮಹದೇವ ಪ್ರಸಾದ್ ಧರ್ಮಪತ್ನಿ. ಆರಂಭ'ದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅಷ್ಟೇನೂ ಆಸಕ್ತಿ ಹೊಂದಿರದ ಗೀತಾ ಅವರು ಅನಿವಾರ್ಯವಾಗಿ ಚುನಾವಣಾ ಕಣಕ್ಕಿಳಿದವರು. ಆದರೆ ಸಾಮಾಜಿಕ ಸೇವೆ ಮತ್ತು ಸಾಹಿತ್ಯ ಅಭಿರುಚಿಯುಳ್ಳ, ನಿರಂತರ ಜನಸಂಪರ್ಕ ಹೊಂದಿದ್ದ ಮಹಿಳೆ. ಮೊದಲ ಬಾರಿಗೆ ಶಾಸಕಿಯಾಗಿ ಸಚಿವರಾಗುವ ಅವಕಾಶ ಬಂದಿದೆ.

ಹೆಚ್.ಎಂ. ರೇವಣ್ಣ

1985ರಲ್ಲಿ ಮಾಗಡಿಯಿಂದ ಕಾಂಗ್ರೆಸ್ ಅಭ್ಯರ್ಥಿ'ಯಾಗಿ ಸ್ಪರ್ಧಿಸಿದರೂ ಜಯ ಒಲಿಯಲಿಲ್ಲ. 1989ರಲ್ಲಿ ಮೊದಲ ಬಾರಿಗೆ ಮಾಗಡಿ ಕ್ಷೇತ್ರದಿಂದ ಆಯ್ಕೆಯಾಗಿ ನಂತರ ಬಂಗಾರಪ್ಪ ಸಂಪುಟದಲ್ಲಿ ಕೃಷಿಖಾತೆ ಸಚಿವರಾಗಿದ್ದರು. 1994ರಲ್ಲಿ ಮಾಗಡಿಯಿಂದ 2008ರಲ್ಲಿ ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸಿದರೂ ಜಯ ಒಲಿಯಲಿಲ್ಲ. 19999ರಲ್ಲಿ ಮಾಗಡಿಯಿಂದ ಗೆದ್ದು ಕೃಷ್ಣ ಸಂಪುಟದಲ್ಲಿ ಸಚಿವ ರಾಗಿದ್ದರು. 2014ರ ಜೂನ್‌ನಲ್ಲಿ ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾದರು. ಕುರುಬ ಸಮುದಾಯದವರು. ಸಿಎಂ ಆಪ್ತವಲಯದಲ್ಲಿ ಗುರುತಿಸಿಕೊಂಡಿದಿದ್ದಾರೆ.

ಆರ್.ಬಿ. ತಿಮ್ಮಾಪುರ

ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶಿಸಿದ ಆರ್.ಬಿ. ತಿಮ್ಮಾಪುರ 1989ರಲ್ಲಿ ಮುಧೋಳ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದರು. ಆದರೆ 1994ರಲ್ಲಿ ಅದೇ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು. 1999ರಲ್ಲಿ ಮತ್ತೆ ಗೆಲುವು ಸಾಧಿಸಿ ಎಸ್. ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು. 2004ರಿಂದ 2013ರವರೆಗೆ ಸತತ ಮೂರು ವಿಧಾನಸಭೆ ಚುನಾವಣೆಗಳಲ್ಲಿ ಪರಾಭವಗೊಂಡಿದ್ದರು. 2016ರ ಜೂನ್ 10ರಂದು ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು.