Asianet Suvarna News Asianet Suvarna News

ಉತ್ತರ ಪತ್ರಿಕೆಯಲ್ಲಿ ತನ್ನ ಅತ್ತಿಗೆಯ ಕಾಲ್ಪನಿಕ ಕಾಮಪುರಾಣ ಬರೆದಿಟ್ಟ ಕ್ಲಾಸ್ 12 ವಿದ್ಯಾರ್ಥಿ

ಕೆಮಿಸ್ಟ್ರಿ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ತಪ್ಪು ಉತ್ತರ ಬರೆಯೋದು ಸಾಮಾನ್ಯ. ಹಾಗೇನೆ ಉತ್ತರ ಗೊತ್ತಾಗ್ತಿಲ್ಲವೆಂದು ಪ್ರಶ್ನೆಯನ್ನೇ ಬಿಟ್ಟುಬಿಡುವುದು ಕೂಡಾ ಸಾಮಾನ್ಯ. ಹಾಗದರೆ ಈ ಗುಜರಾತಿನ ಆನಂದ್ ಜಿಲ್ಲೆಯ ಬೋರ್ಸದ್ ಎಂಬಲ್ಲಿನ 12ನೇ ತರಗತಿ ವಿದ್ಯಾರ್ಥಿಗೇನಾಯಿತೋ ಗೊತ್ತಿಲ್ಲ, ಉತ್ತರ ಪತ್ರಿಕೆಯಲ್ಲಿ ಬರೆದಿರುವುದನ್ನು ನೋಡಿ ಶಿಕ್ಷಕರೇ ಅಘಾತಕ್ಕೊಳಗಾಗಿದ್ದಾರೆ.

Class 12 Science student wrote about sexual fantasies in Chemistry exam answer sheet
  • Facebook
  • Twitter
  • Whatsapp

ಅಹಮದಾಬಾದ್: ಕೆಮಿಸ್ಟ್ರಿ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ತಪ್ಪು ಉತ್ತರ ಬರೆಯೋದು ಸಾಮಾನ್ಯ. ಹಾಗೇನೆ ಉತ್ತರ ಗೊತ್ತಾಗ್ತಿಲ್ಲವೆಂದು ಪ್ರಶ್ನೆಯನ್ನೇ ಬಿಟ್ಟುಬಿಡುವುದು ಕೂಡಾ ಸಾಮಾನ್ಯ. ಹಾಗದರೆ ಈ ಗುಜರಾತಿನ ಆನಂದ್ ಜಿಲ್ಲೆಯ ಬೋರ್ಸದ್ ಎಂಬಲ್ಲಿನ 12ನೇ ತರಗತಿ ವಿದ್ಯಾರ್ಥಿಗೇನಾಯಿತೋ ಗೊತ್ತಿಲ್ಲ, ಉತ್ತರ ಪತ್ರಿಕೆಯಲ್ಲಿ ಬರೆದಿರುವುದನ್ನು ನೋಡಿ ಶಿಕ್ಷಕರೇ ಅಘಾತಕ್ಕೊಳಗಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವಂತೆ, ಮೌಲ್ಯಮಾಪನ ಮಾಡುತ್ತಿದ್ದ ಮಹಿಳಾ ಶಿಕ್ಷಕಿ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆ ನೋಡಿ ದಂಗಾಗಿದ್ದಾರೆ. ಕಾರಣ ಆತ ಬರೆದಿರುವ ಉತ್ತರ ಅಕ್ಷರಶ ಪೋರ್ನ್ ಲೇಖನವಾಗಿತ್ತು. ಅದರಲ್ಲಿ ಆತ ಸಿನೆಮಾ ನಟಿಯಾಗಿರುವ ತನ್ನ ಅತ್ತಿಗೆ ಹಾಗೂ ಅಡುಗೆಯವನ ನಡುವಿನ ಕಾಲ್ಪನಿಕ ಕಾಮಕೇಳಿಯನ್ನು ಬರೆದಿದ್ದಾನೆ. ಶಿಕ್ಷಕಿ ಕೂಡಲೇ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಈ ತರಹ ಅಸಂಬದ್ಧ ಉತ್ತರಗಳನ್ನು ಬರೆಯುವ ಅಭ್ಯರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಅವಕಾಶವಿದ್ದು, ಆತನನ್ನು ಪರೀಕ್ಷಾ ಸುಧಾರಣಾ ಸಮಿತಿಯ ಮುಂದೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ ಆ ವಿದ್ಯಾರ್ಥಿ ಹಾಜರಾಗಲಿಲ್ಲ ಎನ್ನಲಾಗಿದೆ.

ಆ ವಿದ್ಯಾರ್ಥಿಯ ಫಲಿತಾಂಶಗಳನ್ನು ರದ್ದುಪಡಿಸಲು ಹಾಗೂ ಇನ್ನೊಂದು ವರ್ಷ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದಂತೆ ಹಿರಿಯ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆನ್ನಲಾಗಿದೆ.  ಆತನ ಪೋಷಕರ ಗಮನಕ್ಕೆ ಈ ವಿಷಯ ತರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios