ನವದೆಹಲಿ (ಅ.01): ನ್ಯಾಯಾಲಯದ ಹೊರೆಯನ್ನು ಕಡಿಮೆ ಮಾಡಲು, ನ್ಯಾಯಾಲಯದ ಹೊರಗೆ ಬಗೆಹರಿಸಬಹುದಾದ ಹೆಚ್ಚುವರಿ ಪ್ರಕರಣಗಳನ್ನು ಬಗೆಹರಿಸಲು ವ್ಯವಸ್ಥೆ ರೂಪಿಸಿ ಎಂದು ಮುಖ್ಯ ನ್ಯಾಯಾಧೀಶ ಟಿ.ಎಸ್ ಠಾಕೂರ್ ಕಾನೂನು ಸಚಿವಾಲಯಕ್ಕೆ ಒತ್ತಾಯಿಸಿದ್ದಾರೆ.

ಮಾಜಿ ನ್ಯಾಯಾಧೀಶರನ್ನೊಳಗೊಂಡ ಪೀಠವನ್ನು ಸ್ಥಾಪಿಸಿ ನ್ಯಾಯಾಲಯದ ಹೊರಗೆ ತೀರ್ಮಾನಿಸಬಹುದಾದ ಪ್ರಕರಣಗಳನ್ನು ನಿರ್ಧರಿಸುವಂತೆ ಮಾಡಲು ಠಾಕೂರ್ ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ.