ಊರಿನ ಉದ್ದಾರಕ್ಕಾಗಿ ರಾಜಮಹಾರಾಜರು ಕೆರೆಕಟ್ಟೆಗಳನ್ನುನಿರ್ಮಾಣ ಮಾಡಿದ್ದು ಇತಿಹಾಸ. ಆದ್ರೆ ಇಂದು ಬತ್ತಿ ಬರಿದಾಗಿರೋ ಬರದನಾಡಿನ ಕೆರೆಗಳ ಹೂಳೆತ್ತುವ ಕಾರ್ಯವನ್ನು ಮಠಾಧೀಶರು ಹಾಗೂ ಜನಸಾಮಾನ್ಯರು ಮಾಡುತ್ತಿದ್ದಾರೆ.  

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಮಧುರೆ ಗ್ರಾಮದ ಕೆರೆಗೆ ಐತಿಹಾಸಿಕ ಹಿನ್ನಲೆಯಿದೆ. ಈ ಕೆರೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ನೀರಿನ ಮೂಲವೆನಿಸಿದೆ. ಆದ್ರೆ ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಿಲ್ಲದ ಹಿನ್ನಲೆಯಲ್ಲಿ ಬರದಿಂದ ಬತ್ತಿಬರಿದಾಗಿದೆ.  ಈ ತಾಲ್ಲೂಕಿ ನೂರಾರು ಕೆರೆಗಳ ಸ್ಥಿತಿ ಸಹ ಇದೇ ರೀತಿಯಾಗಿದೆ. 

ಇಲ್ಲಿನ ಕೊಳವೆ ಬಾವಿಗಳು ಸಹ ನೀರಿಲ್ಲದಂತಾಗಿ, ಹನಿ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಎಚ್ಚೆತ್ತಿರೋ ಹೊಸದುರ್ಗದ ಭಗಿರಥ ಪೀಠದ ಪುರುಷೋತ್ತಮ ನಂದಸ್ವಾಮೀಜಿ, ಕುಂಚಟಿಗ ಮಠದ ಶಾಂತವೀರ ಸ್ವಾಮೀಜಿ ಹಾಗೂ ಸಾಣೆಹಳ್ಳಿಯ ಪಂಡಿತಾರಾದ್ಯಸ್ವಾಮೀಜಿ ಮತ್ತು ಕಾಗಿನೆಲೆ ಶಾಖಾಮಠದ ಈಶ್ವರಾನಂದಪುರಿಕೆರೆ ಹೂಳೆತ್ತುವ ಅಭಿಯಾನ ಆರಂಭಿಸಿದ್ದಾರೆ. 

ಸಾಣೆಹಳ್ಳಿ ಕೆರೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆ ಅಭಿವೃದ್ಧಿ ಕಾರ್ಯ ಆರಂಭಿಸಿದ್ದೂ ಮಠಾಧೀಶರ ಕಾರ್ಯಕ್ಕೆ ಶಾಸಕ ಗೂಳಿಹಟ್ಟಿ ಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"