ಚಿತ್ರದುರ್ಗ[ಫೆ. 27]  ಚಿತ್ರದುರ್ಗದಲ್ಲಿ ನಾವು ಭಾರತೀಯರು ಎಂಬ ವಾಟ್ಸಪ್ ಗ್ರೂಪ್ ನಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಕಮೆಂಟ್ ಹಾಕಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ‘ಮೋದಿ ಅವರನ್ನು ಯಾರಾದರೂ ಬಾಂಬ್ ಹಾಕಿ ಅಥವಾ ಶೂಟ್ ಮಾಡಿ ಸಾಯಿಸಿದ ನಂತರ ಸ್ಮಾರಕ ಕಟ್ಟೋಣ’ ಎಂದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕ್ಯಾ ಹುವಾ?: ಭಾಷಣ ಮೊಟಕುಗೊಳಿಸಿ ಮೋದಿ ಹೊರಟಿದ್ದೆಲ್ಲಿ?

ವೃತ್ತಿಯಲ್ಲಿ ವೈದ್ಯನಾಗಿರುವ ರಿತೇಶ್ ಜಾನ್ಸನ್ ಈ ಬಗೆಯ ಕಮೆಂಟ್ ಹಾಕಿದ್ದು ಅವನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರು ಈತನ ಮೇಲೆ ದೂರು ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಕಾಂಗ್ರೆಸ್ಸಿಗರು ಸಮಾಧಿ ಕಟ್ಟಿದರೆ ನರೇಂದ್ರ ಮೋದಿ ಸ್ಮಾರಕ ಕಟ್ಟಿದರು ಎಂದು ಹಾಕಿದ್ದ ಕಮೆಂಟ್ ಗೆ ಅವಹೇಳನಕಾರಿಯಾಗಿ ಉತ್ತರ ನೀಡಿದ್ದಾನೆ.ಹೆಚ್ಚಿನ ಸಂಖ್ಯೆಯಲ್ಲಿ ಈ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ  ಎಂಬ ಆಗ್ರಹವನ್ನು ಹಿಂದು ಸಾಮ್ರಾಟ ಧರ್ಮ ಸೇನೆ ಮಾಡಿದೆ.