ಭಾರತೀಯ ವಾಯುಸೇನೆಯ ಮಿಗ್-21 ವಿಮಾನ ಪತನ| ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ| ಭಾರತ-ಪಾಕ್ ಎರಡೂ ರಾಷ್ಟ್ರದಲ್ಲಿ ಬಿಗುವಿನ ವಾತಾವರಣ| ದೆಹಲಿಯ ವಿಜ್ಞಾನ ಭವನದಲ್ಲಿ ಭಾಷಣ ಅರ್ಧಕ್ಕೆ ನಿಲ್ಲಸಿದ ಪ್ರಧಾನಿ ಮೋದಿ| ದಾಳಿ ಮಾಹಿತಿ ಪಡೆದು ಭಾಷಣ ನಿಲ್ಲಿಸಿ ಹೊರನಡೆದ ಪ್ರಧಾನಿ|
ನವದೆಹಲಿ(ಫೆ.27): ಭಾರತೀಯ ವಾಯುಸೇನೆಯ ಮಿಗ್-21 ವಿಮಾನ ಪತನದ ಹಿನ್ನೆಲೆಯಲ್ಲಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಯ ಬಳಿಕ ಭಾರತ-ಪಾಕ್ ಎರಡೂ ರಾಷ್ಟ್ರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಉನ್ನತ ಮಟ್ಟದ ಸಭೆಗಳ ಸರದಿ ಆರಂಭವಾಗಿದೆ.
ಅದರಂತೆ ನವದೆಹಲಿಯ ವಿಜ್ಞಾನ ಭವನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಪ್ರಧಾನಿ ಮೋದಿ, ಕಾರ್ಯಕ್ರಮ ಮೊಟಕುಗೊಳಿಸಿ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ.
ವಿಜ್ಞಾನ ಭವನದಲ್ಲಿ ಮೋದಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಸಚಿವ ರಾಜವರ್ಧನ್ ರಾಠೋಡ್ ದಾಳಿಯ ಕುರಿತು ಮಾಹಿತಿ ನೀಡಿದರು. ಕೂಡಲೇ ಭಾಷಣ ನಿಲ್ಲಿಸಿದ ಮೋದಿ ಅಲ್ಲಿಂದ ತೆರಳಿದರು.
"
