ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ನಿಯೋಜಿಸಲಾಗಿತ್ತು. 1963ರಲ್ಲಿ ಗಡಿಯ ಸಮೀಪ ತನ್ನ ಕ್ಯಾಂಪ್'ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅಕಸ್ಮಾತ್ ಭಾರತ ಗಡಿ ಪ್ರವೇಶಿಸಿದ್ದಾನೆ. ಮೊದಲೆ ದಾಳಿಯಿಂದ ನಮ್ಮ ಯೋಧರು ಸುಮ್ಮನಿರುತ್ತಾರೆಯೇ. ನಮ್ಮ ಗಡಿ ಪ್ರವೇಶಿಸಿದ ತಕ್ಷಣವೇ ವಾಂಗ್'ನನ್ನು ಬಂಧಿಸಿದ್ದಾರೆ. ದುರಂತವೆಂದರೆ ಈತ ಸೆರೆ ಸಿಕ್ಕಾಗ ಈತನ ಬಳಿ ಯಾವುದೇ ದಾಖಲೆಗಳಿರಲಿಲ್ಲ. ಇದು ವಾಂಗ್'ಗೆ ಮತ್ತಷ್ಟು ತೊಂದರೆಯಾಯಿತು.

ಭೋಪಾಲ್(ಫೆ.5): ಇದು ಭಾರತದಲ್ಲಿ ಸೆರೆಯಾಗಿ 50 ವರ್ಷದಿಂದ ಇಲ್ಲೇ ನೆಲಸಿರುವ ಕತೆ. ಈತ 5 ದಶಕದಿಂದ ಸೆರೆಯಾದವನು ವಾಪಸ್ ತನ್ನ ತಾಯ್ನಡಿಗೆ ಮರಳಲೇ ಇಲ್ಲ. ಅಸಲಿಗೆ ಸೆರೆಸಿಕ್ಕವನು ಯಾರು, ಏತಕ್ಕಾಗಿ ಸಿಕ್ಕ, ಭಾರತದಲ್ಲಿಯೇ ಇರಲು ಕಾರಣವೇನು ಅಂತೀರಾ ಈ ಸ್ಟೋರಿ ಓದಿ.

80 ವರ್ಷದ ವಾಂಗ್ ಕ್ವಿ ಭಾರತದಲ್ಲಿ ನೆಲಸಿರುವ ಚೀನಾ ನಾಗರಿಕ. 1962 ರಲ್ಲಿ ಭಾರತ ಹಾಗೂ ಚೀನಾ ನಡುವೆ ನಡೆದ ಯುದ್ಧ ನಡೆದಿತ್ತು. ಸುಮ್ಮನಿದ್ದ ನಮ್ಮ ಸೇನೆಯ ಮೇಲೆ ಮೋಸದಿಂದ ಶತ್ರ ರಾಷ್ಟ್ರದವರು ಮೇಲರಗಿದ್ದರು. ಈ ಸಂದರ್ಭದಲ್ಲಿ ಚೀನಾ ಲಿಬರೇಷನ್ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ವಾಂಗ್ ಕ್ವಿಯನ್ನು  ಅಸ್ಸಾಂನ ಭಾರತ ಹಾಗೂ ಚೀನಾ ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ನಿಯೋಜಿಸಲಾಗಿತ್ತು. 1963ರಲ್ಲಿ ಗಡಿಯ ಸಮೀಪ ತನ್ನ ಕ್ಯಾಂಪ್'ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅಕಸ್ಮಾತ್ ಭಾರತ ಗಡಿ ಪ್ರವೇಶಿಸಿದ್ದಾನೆ. ಮೊದಲೆ ದಾಳಿಯಿಂದ  ಕೋಪಗೊಂಡಿದ್ದ ನಮ್ಮ ಯೋಧರು ಸುಮ್ಮನಿರುತ್ತಾರೆಯೇ. ಗಡಿ ಪ್ರವೇಶಿಸಿದ ತಕ್ಷಣವೇ ವಾಂಗ್'ನನ್ನು ಬಂಧಿಸಿದ್ದಾರೆ. ದುರಂತವೆಂದರೆ ಈತ ಸೆರೆ ಸಿಕ್ಕಾಗ ಈತನ ಬಳಿ ಯಾವುದೇ ದಾಖಲೆಗಳಿರಲಿಲ್ಲ. ಇದು ವಾಂಗ್'ಗೆ ಮತ್ತಷ್ಟು ತೊಂದರೆಯಾಯಿತು.

ಭಾರತದ ಕಾನೂನಿನನ್ವಯ ವಿಚಾರಣೆಗೊಳಿಸಿದ ಸೇನಾ ಕೋರ್ಟ್ ಜೈಲು ಶಿಕ್ಷೆಯನ್ನು ವಿಧಿಸಿತು. 7 ವರ್ಷ ಭಾರತದ ವಿವಿಧ ಜೈಲುಗಳಲ್ಲಿ ಸೆರೆವಾಸ ಅನುಭವಿಸಿ 1969 ಬಿಡುಗಡೆಗೊಂಡ. ಯಾವುದೇ ಅಧಿಕೃತ ದಾಖಲೆಗಳಿಲ್ಲದ ಕಾರಣ ಮತ್ತೆ ತಾಯ್ನಡಿಗೆ ಮರಳಲು ಸಾಧ್ಯವಾಗಲಿಲ್ಲ.

ನಂತರ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನೆಲಸಿ ಮಿಲ್'ವೊಂದರಲ್ಲಿ ವಾಚ್'ಮ್ಯಾನ್ ಆಗಿ ದುಡಿಯಲು ಆರಂಭಿಸುತ್ತಾನೆ. ಸ್ಥಳೀಯ ಭಾಷೆ ಹಿಂದಿಯನ್ನು ಕಲಿತ. ತನ್ನ ನಿಜ ನಾಮಧೇಯವನ್ನು ಸ್ಥಳೀಯತೆಗೆ ತಕ್ಕಂತೆ ರಾಜ್ ಬಹುದ್ದೂರ್ ಎಂದು ಬದಲಾಯಿಸಿಕೊಂಡ. ತಾನು ವಾಸಿಸುವ ಗ್ರಾಮದ ಹುಡುಗಿ ಸುಶೀಲಾನನ್ನು  ಮದುವೆಯಾದ. ನಂತರ ನಾಲ್ಕು ಮಕ್ಕಳಿಗೆ ಅಪ್ಪನಾದ. ಹಲವು ವರ್ಷಗಳಿಂದ ಭಾರತೀಯನಾಗಿದ್ದ ಈತನಿಗೆ ಕೊನೆಗಾಲದಲ್ಲಿ ತಾಯ್ನಾಡು ಚೀನಾಕ್ಕೆ ಹೋಗುವ ಹಂಬಲವಾಗಿದ್ದು, ತನ್ನ ಕೊನೆಯ ದಿನಗಳನ್ನು ಅಲ್ಲಿಯೇ ಕಳೆಯಬೇಕೆಂಬ ಆಸೆ ಉಂಟಾಯಿತು.

ಆದರೆ ಚೀನಾಕ್ಕೆ ಹೋಗುವಷ್ಟು ಹಣ ಹಾಗೂ ಅಗತ್ಯ ದಾಖಲೆ ಹೊಂದಿಕೊಳ್ಳುವಷ್ಟು ಶಕ್ತಿ ಈತನ ಬಳಿಯಿರಲಿಲ್ಲ. ತನ್ನ ಕೊನೆಗಾಲದ ಆಸೆಯನ್ನು ಈಡೇರಿಸಿಕೊಡಿ ಎಂದು ಸ್ಥಳೀಯ ರಾಜಕಾರಣಿಗಳಿಂದ ಅಧಿಕಾರದಲ್ಲಿದ್ದ ಪ್ರಧಾನಿಗಳಿಗೂ ಮನವಿ ಸಲ್ಲಿಸಿದ. ಆದರೆ ಯಾರೊಬ್ಬರು ಈತನ ಮಾತನು ಆಲಿಸಲಿಲ್ಲ. 2009 ರಲ್ಲಿ ವಾಂಗ್'ನ ಅಣ್ಣ ವಾಂಗ್ ಯಂಗ್ಜುನ್ ಭಾರತಕ್ಕೆ ಭೇಟಿ ನೀಡಿದ್ದಾಗ ಈತನ ಮನಗೆ ಬಂದಿದ್ದಾನೆ. ತಾಯ್ನಡಿಗೆ ಮರಳುವ ಹಂಬಲ ವ್ಯಕ್ತಪಡಿಸಿದ ವಾಂಗ್ ಇದನ್ನು ಚೀನಾ ದೇಶದ ರಾಯಭಾರ ಅಧಿಕಾರಿಗಳಲ್ಲಿ ಪ್ರಸ್ತಾಪಿಸುವಂತೆ ತಿಳಿಸಿದ್ದಾನೆ. ತಮ್ಮನ ಬಯಕೆಯಂತೆ ಯಂಗ್ಜುನ್ ಅಧಿಕಾರಿಗಳ ಬಳಿ ವಾಂಗ್ ವಿಷಯವನ್ನು ತಿಳಿಸಿದ್ದಾರೆ.

ಭಾರತ ಹಾಗೂ ಚೀನಾ ಸರ್ಕಾರಗಳ ಮಾತುಕತೆಯ ಪರಿಣಾಮ 2013 ರಲ್ಲಿ ಅಂತಿಮವಾಗಿ ವಾಂಗ್'ಗೆ ಪಾಸ್'ಪೋರ್ಟ್ ದೊರಕಿದೆ. ಭಾರತ ಸರ್ಕಾರ ಕೂಡ ಈತನನ್ನು ಮರಳಿ ತಾಯ್ನಡಿಗೆ ಕಳುಹಿಸಲು ಎಲ್ಲ ರೀತಿಯ ನೆರವುಗಳನ್ನು ನೀಡುವುದಾಗಿ ಹೇಳಿದೆ. ಚೀನಾ ಸರ್ಕಾರ ಕೂಡ ವಾಪಸ್ ಚೀನಕ್ಕೆ ಬಂದರೆ ಅಲ್ಲಿ ವಾಸಿಸಲು ವಿಶೇಷ ವ್ಯವಸ್ಥೆ ಮಾಡುವುದಾಗಿ ಕೂಡ ತಿಳಿಸಿದೆ. ಎಲ್ಲ ನೆರವಿನೊಂದಿಗೆ ಎರಡು ದೇಶಗಳು ಅಂತಿಮ ಸಮ್ಮತಿ ನೀಡಿದರೆ ವಾಂಗ್ ಕ್ವಿ ಕೊನೆಗಾಲದ ಕನಸು ನನಸಾಗುವುದು.