ನೆರೆಯ ಚೀನಾವು ಭಾರತಕ್ಕೆ ಯುದ್ಧ ಬೆದರಿಕೆ ಹಾಕುತ್ತಿದ್ದು ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇರುವ ಸನ್ನಿವೇಶದಲ್ಲಿ ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಚೀನಾ ರಾಯಭಾರಿ ಲೋ ಝಹುವೈಯನ್ನು ಭೇಟಿ ಮಾಡಿರುವುದನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ.

ನವದೆಹಲಿ (ಜು.10): ನೆರೆಯ ಚೀನಾವು ಭಾರತಕ್ಕೆ ಯುದ್ಧ ಬೆದರಿಕೆ ಹಾಕುತ್ತಿದ್ದು ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇರುವ ಸನ್ನಿವೇಶದಲ್ಲಿ ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಚೀನಾ ರಾಯಭಾರಿ ಲೋ ಝಹುವೈಯನ್ನು ಭೇಟಿ ಮಾಡಿರುವುದನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ.

ರಾಹುಲ್ ಗಾಂಧಿ ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದಾರೆನ್ನುವ ವರದಿಯನ್ನು ಕಾಂಗ್ರೆಸ್ ನಿರಾಕರಿಸಿತ್ತು. ಅವರ ಭೇಟಿಯ ಫೋಟೋ ಹೊರಬಂದ ಬಳಿಕ ಯು ಟರ್ನ್ ಹೊಡೆದಿದೆ. ಭೇಟಿ ನಿಜವೆಂದು ಒಪ್ಪಿಕೊಂಡಿದೆ.

ಚೀನಾ ರಾಯಭಾರಿ, ಭೂತಾನ್ ರಾಯಭಾರಿ ಹಾಗೂ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್’ರವರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆಂದು ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.

ಕಾಲಾನುಕ್ರಮದಿಂದ ಬೇರೆ ಬೇರೆ ದೇಶದ ರಾಯಭಾರಿಗಳು ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರನ್ನು ಭೇಟಿ ಮಾಡುತ್ತಾ ಬಂದಿದ್ದಾರೆ. ಅದೇ ರೀತಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ ಎಂದು ಸರ್ಜೆವಾಲಾ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಸಾಮಾಜಿ ಜಾಲತಾಣಗಳ ನಿರ್ವಹಣೆ ಹೊತ್ತಿರುವ ರಮ್ಯಾ, ರಾಹುಲ್ ಚೀನಾ ರಾಯಬಾರಿಗಳನ್ನು ಭೇಟಿ ಮಾಡಿದ್ದರಲ್ಲಿ ತಪ್ಪೇನಿದೆ? ಹಂಬರ್ಗ್’ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರಧಾನಿಯೊಂದಿಗೆ ಯಾಕೆ ಗಡಿ ತಕರಾರಿನ ಬಗ್ಗೆ ಚಕಾರವೆತ್ತಿಲ್ಲ? ಇವರೊಬ್ಬ ದುರ್ಬಲ ಪ್ರಧಾನಿ ಎಂದು ಪ್ರಶ್ನಿಸಿದ್ದಾರೆ.

Scroll to load tweet…