Asianet Suvarna News Asianet Suvarna News

ಚೀನಾದ ಬೀಜಿಂಗ್'ನಲ್ಲಿ ಬ್ರಿಕ್ಸ್ ರಾಷ್ಟ್ರಗಳ ಸಭೆ: ಭಾರತ-ಚೀನಾ ಗಡಿ ವಿವಾದದ ವಿಚಾರ ಪ್ರಸ್ತಾಪಿಸಿದ ಚೀನಾ!

ಬ್ರಿಕ್ಸ್ ರಾಷ್ಟ್ರಗಳ ರಾಷ್ಟ್ರಿಯ ಭದ್ರತಾ ಸಲಹೆಗಾರರ ಸಭೆ ಚೀನಾದಲ್ಲಿ ನಡೆಯಿತು. ಸಭೆಗೆ ಭಾರತದ ಪ್ರತಿನಿಧಿಯಾಗಿ ಎನ್ಎಸ್ಎ ಅಜಿತ್ ದೋವಲ್ ಭಾಗವಹಿಸಿದ್ರು. ಸಭೆಯಲ್ಲಿ ಅಜಿತ್ ದೋವಲ್ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Chinas Xi calls for more cooperation from BRICS amid standoff with India

ಬೀಜಿಂಗ್(ಜು.29): ಬ್ರಿಕ್ಸ್ ರಾಷ್ಟ್ರಗಳ ರಾಷ್ಟ್ರಿಯ ಭದ್ರತಾ ಸಲಹೆಗಾರರ ಸಭೆ ಚೀನಾದಲ್ಲಿ ನಡೆಯಿತು. ಸಭೆಗೆ ಭಾರತದ ಪ್ರತಿನಿಧಿಯಾಗಿ ಎನ್ಎಸ್ಎ ಅಜಿತ್ ದೋವಲ್ ಭಾಗವಹಿಸಿದ್ರು. ಸಭೆಯಲ್ಲಿ ಅಜಿತ್ ದೋವಲ್ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ವಿವಿಧ ದೇಶಗಳ ಗಡಿ ವಿವಾದ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಚೀನಾ ಅಧ್ಯಕ್ಷ  ಕ್ಸಿ ಜಿನ್ ಪಿಂಗ್ ವ್ಯಾಪಾಕ ಭೌಗೋಳಿಕ ಅಂತರದ ನಡುವೆಯೂ ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ವಿಶ್ವಾಸ ಹಾಗೂ ಸಹಕಾರ ಮುಂದುವರಿದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಆದ್ರೆ ಎಲ್ಲಿಯೂ ಭಾರತದ ಜೊತೆಗಿನ ಗಡಿ ವಿವಾದದ ಬಗ್ಗೆ ಪ್ರಸ್ತಾಪಿಸದೆ ಚೀನಾ ಎಚ್ಚರಿಕೆ ನಡೆ ಅನುಸರಿಸಿತು.

ಇನ್ನು ಇದೇ ವೇಳೆ ಮಾತನಾಡಿದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್  ಭಯೋತ್ಪಾದನೆ ನಿಗ್ರಹ ಸೇರಿದಂತೆ ಪ್ರಾದೇಶಿಕ ಮತ್ತು ಗಡಿ ವಿಷಯಗಳ ಕುರಿತು ಬ್ರಿಕ್ಸ್​ ದೇಶಗಳು ನಾಯಕತ್ವ ವಹಿಸಿಕೊಳ್ಳಬೇಕೆಂದು ಆಗ್ರಹಿಸಿದ್ರು.

 

Follow Us:
Download App:
  • android
  • ios