11:31 PM (IST) Mar 10

Karnataka News Live 10 March 2026ಗಂಗಾವತಿಯಲ್ಲಿ ಹಿರಿಯ ವಕೀಲರ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ - ಠಾಣೆಗೆ ಮುತ್ತಿಗೆ ಹಾಕಿದ ವಕೀಲರು

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುವುದನ್ನು ಪ್ರಶ್ನಿಸಿದ್ದಕ್ಕೆ ಹಿರಿಯ ನ್ಯಾಯವಾದಿ ಪ್ರಭಾಕರ್ ಮತ್ತು ಅವರ ಪತ್ನಿ ಮೇಲೆ ಜುಬೇರ್ ಎಂಬ ಯುವಕ ಹಲ್ಲೆ ಮಾಡಿದ್ದಾನೆ. ಈ ಘಟನೆಯನ್ನು ಖಂಡಿಸಿ ವಕೀಲರು ಮತ್ತು ಸಾರ್ವಜನಿಕರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

Read Full Story
11:30 PM (IST) Mar 10

Karnataka News Live 10 March 2026ಬಡವರ ಆಶ್ರಯ ಮನೆಗಳಿಗೆ ಹಣ ಇಲ್ಲ - ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಎಲ್ಲಾ ಕೊಳೆಗಳನ್ನು ಒರೆಸಿ ಬಿಸಾಕಿದ ಯಾವುದೇ ಉಪಯೋಗಕ್ಕೆ ಬಾರದ ವೆಸ್ಟ್ ಅನ್ನು ಒಟ್ಟಿಗೆ ಸೇರಿ ಕೌದಿ ರೂಪದಲ್ಲಿ ಹೊಲೆದ ಹಾಗೆ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

Read Full Story
10:54 PM (IST) Mar 10

Karnataka News Live 10 March 2026ಬಜೆಟಲ್ಲಿ ಹೇಳಿದಂತೆ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಶೀಘ್ರ - ಸಚಿವ ಮಧು ಬಂಗಾರಪ್ಪ

ಆಯವ್ಯಯದಲ್ಲಿ ಘೋಷಿಸಿದಂತೆ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ 15 ಸಾವಿರ ಶಿಕ್ಷಕರ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

Read Full Story
10:49 PM (IST) Mar 10

Karnataka News Live 10 March 2026ಬಿಎಸ್ಎನ್ಎಲ್ ನೇಮಕಾತಿ 2026 - 120 ಅಧಿಕಾರಿಗಳ ಅರ್ಜಿ ಆಹ್ವಾನ, 50 ಸಾವಿರಕ್ಕೂ ಹೆಚ್ಚು ವೇತನ!

ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ (BSNL) 2026ನೇ ಸಾಲಿನ ನೇಮಕಾತಿಗಾಗಿ 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಲೇಖನದಲ್ಲಿ ವಿದ್ಯಾರ್ಹತೆ, ವಯೋಮಿತಿ, ವೇತನ, ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ನೀಡಲಾಗಿದೆ.
Read Full Story
10:38 PM (IST) Mar 10

Karnataka News Live 10 March 2026ದಿ ಗರ್ಲ್‌ಫ್ರೆಂಡ್‌ ಸಿನಿಮಾದಂತೆ ರಿಯಲ್ ಲೈಫ್‌ನಲ್ಲೂ ರಶ್ಮಿಕಾ ಅನುಭವಿಸಿದ್ದು ನರಕಯಾತನೆ! ಬೆಚ್ಚಿಬೀಳಿಸುತ್ತೆ ತಾಯಿ ಬಿಚ್ಚಿಟ್ಟ ರಹಸ್ಯ!

ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ, ಮಗಳ ಬ್ರೇಕಪ್ ಕುರಿತು ಮಾತನಾಡಿದ್ದಾರೆ. ಆ ನಟ ರಶ್ಮಿಕಾ ಬೆಳವಣಿಗೆಯನ್ನು ಸಹಿಸದೆ, 'ಗೀತಾ ಗೋವಿಂದಂ' ಚಿತ್ರದ ಬಳಿಕ ವೃತ್ತಿಜೀವನವನ್ನೇ ಅಂತ್ಯಗೊಳಿಸಲು ಒತ್ತಡ ಹೇರಿದ್ದ ಮತ್ತು ಆತನ ಪೊಸೆಸಿವ್‌ನೆಸ್‌ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. 

Read Full Story
10:33 PM (IST) Mar 10

Karnataka News Live 10 March 2026ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಭಾರೀ ಸ್ಫೋಟ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕಲ್ಲಿನ ಕ್ವಾರಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಹೊಲ, ದನದ ಕೊಟ್ಟಿಗೆ ಮತ್ತು ಮರಗಳಿಗೆ ಹಾನಿಯಾಗಿದೆ. ಘಟನೆಯಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ.

Read Full Story
10:22 PM (IST) Mar 10

Karnataka News Live 10 March 2026ಕರ್ನಾಟಕದ ವಿಶಿಷ್ಟ ಹೆರಿಟೇಜ್ ವಿಲೇಜ್ ಮ್ಯೂಸಿಯಂ, ಈ ಮಾಯಾಲೋಕದಲ್ಲಿದೆ 100 ವರ್ಷಗಳ ಹಿಂದಿನ ಜಗತ್ತು!

ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್, ದಕ್ಷಿಣ ಭಾರತದ ಶ್ರೀಮಂತ ವಾಸ್ತುಶಿಲ್ಪ ಪರಂಪರೆಯನ್ನು ಪ್ರದರ್ಶಿಸುವ ಒಂದು ವಿಶಿಷ್ಟ ತೆರೆದ ವಸ್ತುಸಂಗ್ರಹಾಲಯವಾಗಿದೆ. ಇಲ್ಲಿ 1 ಶತಮಾನಕ್ಕೂ ಹಳೆಯದಾದ ಸಾಂಪ್ರದಾಯಿಕ ಮನೆಗಳು, ದೇವಾಲಯಗಳನ್ನು ಪುನರ್ ನಿರ್ಮಿಸಿ, ಆ ಕಾಲದ ಜೀವನಶೈಲಿ ಅನುಭವಿಸಲು ಅವಕಾಶ ಕಲ್ಪಿಸಲಾಗಿದೆ.

Read Full Story
10:21 PM (IST) Mar 10

Karnataka News Live 10 March 2026ಇಂದು ದಕ್ಷ KAS ಅಧಿಕಾರಿಯಾಗಿರೋ 'ಸಿಲ್ಲಿ ಲಲ್ಲಿ' ಧಾರಾವಾಹಿ ಗೋವಿಂದ ಪಾತ್ರಧಾರಿ! 25 ಸಲ ವರ್ಗಾವಣೆ ಆಯ್ತು!

Silli Lalli Kannada Serial Govinda Real Name: ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಕಾಂಪೌಂಡರ್‌ ಗೋವಿಂದನ ಪಾತ್ರದಲ್ಲಿ ನಕ್ಕು ನಗಿಸಿದ್ದ ಸಂಗಪ್ಪ ಉಪಾಸೆ ಅವರು ಇಂದು ಸರ್ಕಾರಿ ಕೆಲಸದಲ್ಲಿದ್ದಾರೆ. ಸಿನಿಮಾದಲ್ಲಿ ಇವರಿಗೆ ಸಂಗಮೇಶ್‌ ಎಂದು ಕರೆಯಲಾಗುವುದಂತೆ.

Read Full Story
09:38 PM (IST) Mar 10

Karnataka News Live 10 March 2026ದಾವಣಗೆರೆ ಉಪಚುನಾವಣೆ ಟಿಕೆಟ್ ಹೈಕಮಾಂಡ್ ನಿರ್ಧಾರ - ಸಚಿವ ಜಮೀರ್‌ ಅಹಮದ್‌ ತಿರುಗೇಟು

ಟಿಕೆಟ್‌ ನೀಡಬೇಕೆಂಬುದನ್ನು ನಾನೂ ನಿರ್ಧರಿಸಲಾಗಲ್ಲ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರೂ ನಿರ್ಧರಿಸಲಾಗುವುದಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದು ಸಚಿವ ಜಮೀರ್‌ ಅಹಮದ್‌ ತಿರುಗೇಟು ನೀಡಿದ್ದಾರೆ.

Read Full Story
09:20 PM (IST) Mar 10

Karnataka News Live 10 March 2026ಎಐ ತಿಳಿದಿದ್ದರೆ ಹೊಸಬರಿಗೆ ಎಚ್‌ಸಿಎಲ್ ಬಂಪರ್ ಸಂಬಳ, 18 ರಿಂದ 22 ಲಕ್ಷ ರೂವರೆಗೆ ಪ್ಯಾಕೇಜ್ ಆಫರ್!

ಪ್ರಮುಖ ಐಟಿ ಸಂಸ್ಥೆ ಎಚ್‌ಸಿಎಲ್ ಟೆಕ್, ಕೃತಕ ಬುದ್ಧಿಮತ್ತೆ (AI) ಮತ್ತು ಸಂಬಂಧಿತ ಕೌಶಲ್ಯಗಳನ್ನು ಹೊಂದಿರುವ ಹೊಸಬರಿಗೆ ವಾರ್ಷಿಕ ವೇತನವನ್ನು 18 ರಿಂದ 22 ಲಕ್ಷ ರೂ.ಗೆ ಹೆಚ್ಚಿಸಿದೆ. 'ಎಲೈಟ್ ಕ್ಯಾಡರ್' ಎಂದು ಕರೆಯಲ್ಪಡುವ ಈ ವಿಶೇಷ ನೇಮಕಾತಿ ತಂತ್ರವು, ಉನ್ನತ ಪ್ರತಿಭೆಗಳನ್ನು ಆಕರ್ಷಿಸುವ ಗುರಿ ಹೊಂದಿದೆ. ಇನ್ಫೋಸಿಸ್‌ನಂತಹ ಇತರ ಕಂಪನಿಗಳು ಕೂಡ ಇದೇ ದಾರಿಯಲ್ಲಿ ಸಾಗುತ್ತಿವೆ.
Read Full Story
09:04 PM (IST) Mar 10

Karnataka News Live 10 March 2026'ಸಿನಿಮಾ ಮಾಡಲ್ಲ ಅಂತಾ ಟ್ವೀಟ್‌ ಮಾಡು..' ಅನುಮಾನಕ್ಕೆ ಬಲಿಯಾಯ್ತು ಪ್ರೀತಿ, ರಶ್ಮಿಕಾ ಮಂದಣ್ಣ ತಾಯಿಯ ಆಡಿಯೋ ಬಾಂಬ್‌!

ರಶ್ಮಿಕಾ ಮಂದಣ್ಣ ಬ್ರೇಕಪ್‌ಗೆ ಅವರೇ ಕಾರಣವೆಂದು ಈ ಹಿಂದೆ ದೂಷಿಸಲಾಗಿತ್ತು. ಆದರೆ, ಇದೀಗ ಅವರ ತಾಯಿಯದ್ದು ಎನ್ನಲಾದ ಆಡಿಯೋವೊಂದು, ನಟನ ಅನುಮಾನ ಮತ್ತು ಸರ್ವಾಧಿಕಾರಿ ಮನಸ್ಥಿತಿಯೇ ಸಂಬಂಧ ಮುರಿಯಲು ಕಾರಣ ಎಂದು ಬಹಿರಂಗಪಡಿಸಿದೆ.

Read Full Story
08:56 PM (IST) Mar 10

Karnataka News Live 10 March 2026ಕೊಲ್ಲಿ ಸಂಕಷ್ಟ - ಕುವೈತ್‌ನಲ್ಲಿ ಶೃಂಗೇರಿಯ ತಾಯಿ-ಮಗಳ ಪರದಾಟ, 7 ತಿಂಗಳ ಗರ್ಭಿಣಿ ಮಹಿಳೆಯ ಸುರಕ್ಷಿತ ವಾಪಸ್ಸಿಗೆ ಮನವಿ

ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧ ಪರಿಸ್ಥಿತಿಯಿಂದಾಗಿ ವಿಮಾನ ಸಂಚಾರ ವ್ಯತ್ಯಯಗೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ಏಳು ತಿಂಗಳ ಗರ್ಭಿಣಿ ಮತ್ತು ಅವರ ಮಗಳು ಕುವೈತ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಅವರ ಕುಟುಂಬವು ಕೇಂದ್ರ ಸರ್ಕಾರದ ಸಹಾಯವನ್ನು ಕೋರಿದೆ.
Read Full Story
07:51 PM (IST) Mar 10

Karnataka News Live 10 March 2026ವಿಡಿಯೋ ಹಾಕಿ ಮೂರೇ ಗಂಟೆಗಳಲ್ಲಿ Bigg Boss ರಘುಗೆ ಬಂದೇ ಬಿಟ್ಟು ಯುಟ್ಯೂಬ್​ ದುಡ್ಡು! ಸಿಕ್ಕಿತು ಬೆಳ್ಳಿ ಬಟನ್​

ಬಿಗ್​ಬಾಸ್​ ಖ್ಯಾತಿಯ ಮ್ಯೂಟಂಟ್​ ರಘು ತಮ್ಮ ದಶಕಗಳ ಕನಸಾಗಿದ್ದ 'ಮ್ಯೂಟೆಂಟ್​ ಶೆಫ್'​ ಯುಟ್ಯೂಬ್​ ಚಾನೆಲ್ ಆರಂಭಿಸಿದ್ದಾರೆ. ಈ ಚಾನೆಲ್, ವಿಡಿಯೋ ಹಾಕಿದ ಮೂರೇ ಗಂಟೆಗಳಲ್ಲಿ ಮಾನಿಟೈಸ್​ ಆಗಿದ್ದು, ಕೆಲವೇ ವಾರಗಳಲ್ಲಿ ಒಂದು ಲಕ್ಷ ಸಬ್​ಸ್ಕ್ರೈಬರ್​ಗಳನ್ನು ಪಡೆದು ಸಿಲ್ವರ್​ ಬಟನ್​ ಗಳಿಸಿದೆ.
Read Full Story
07:50 PM (IST) Mar 10

Karnataka News Live 10 March 2026ಆನ್‌ಲೈನ್ ಕಿರುಕುಳ ಪ್ರಕರಣ - ಕಟಕಟೆಯಲ್ಲಿ ನಿಂತ ನಟಿ ರಮ್ಯಾ, ಇದು ನನ್ನ ವೈಯಕ್ತಿಕ ಉದ್ದೇಶಕ್ಕಾಗಿ ಅಲ್ಲ ಎಂದ್ರು!

ನಟಿ ರಮ್ಯಾ ಅವರು ತಮಗೆ ಬಂದ ಅಶ್ಲೀಲ ಸಂದೇಶ ಮತ್ತು ಬೆದರಿಕೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಇದು ವೈಯಕ್ತಿಕ ಹೋರಾಟವಲ್ಲ, ಬದಲಿಗೆ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಈ ಪ್ರಕರಣವನ್ನು ಮುಂದುವರಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. 12 ಆರೋಪಿಗಳ ವಿರುದ್ಧದ ಈ ಪ್ರಕರಣದ ವಿಚಾರಣೆ ಆರಂಭವಾಗಿದೆ.
Read Full Story
06:58 PM (IST) Mar 10

Karnataka News Live 10 March 2026ದೋಸೆಗೆ ಕೇಡುಗಾಲ, ಸ್ಯಾಂಡ್‌ವಿಚ್‌ಗೆ ಶುಭಕಾಲ - LPG ಕೊರತೆಯಿಂದ ಬೆಂಗಳೂರು ರೆಸ್ಟೋರೆಂಟ್‌ಗಳಲ್ಲಿ ಬದಲಾದ ಮೆನು!

ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಬೆಂಗಳೂರಿನ ಹೋಟೆಲ್‌ಗಳು ತೀವ್ರ ಅಡುಗೆ ಅನಿಲದ ಕೊರತೆ ಎದುರಿಸುತ್ತಿವೆ. ಈ ಬಿಕ್ಕಟ್ಟಿನಿಂದಾಗಿ, ಹಲವು ಹೋಟೆಲ್‌ಗಳು ಸೌದೆ ಒಲೆಗಳನ್ನು ಬಳಸುತ್ತಿದ್ದು, ದೋಸೆಯಂತಹ ಖಾದ್ಯಗಳನ್ನು ಮೆನುವಿನಿಂದ ತೆಗೆದುಹಾಕುತ್ತಿವೆ ಮತ್ತು ಹೋಟೆಲ್‌ಗಳನ್ನು ಮುಚ್ಚುವ ಹಂತಕ್ಕೆ ತಲುಪಿವೆ.
Read Full Story
05:43 PM (IST) Mar 10

Karnataka News Live 10 March 2026ಕರ್ನಾಟಕ ಸರ್ಕಾರಿ ವೈದ್ಯರ ಬೇಡಿಕೆಗಳಿಗೆ ಸರ್ಕಾರದ ತಾತ್ವಿಕ ಒಪ್ಪಿಗೆ, ಸಂಧಾನ ಸಭೆ ಯಶಸ್ವಿ, ಒಪಿಡಿ ಸೇವೆ ಬಂದ್?

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ವೈದ್ಯಾಧಿಕಾರಿಗಳು ಮುಷ್ಕರಕ್ಕೆ ಸಜ್ಜಾಗಿದ್ದರು. ಸರ್ಕಾರದೊಂದಿಗೆ ನಡೆದ ಸಂಧಾನ ಸಭೆಯಲ್ಲಿ, ಕೆಲವು ಬೇಡಿಕೆಗಳಿಗೆ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು, ಉಳಿದವುಗಳನ್ನು ಕಾಲಮಿತಿಯೊಳಗೆ ಈಡೇರಿಸುವ ಭರವಸೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಮುಷ್ಕರದ ಕುರಿತು ವೈದ್ಯರ ಸಂಘ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
Read Full Story
05:04 PM (IST) Mar 10

Karnataka News Live 10 March 2026ಬರ್ತ್‌ಡೇ ಪಾರ್ಟಿ ಮಾಡ್ಬೇಕು, ಒಂದು ದಿನಕ್ಕೆ ಕಿಂಗ್‌ಫಿಶರ್‌ ಟವರ್‌ ಬಾಡಿಗೆಗೆ ನೀಡಿ ಎಂದು ಮಲ್ಯಗೆ ಕೇಳಿದ ಉದ್ಯಮಿ!

ಬೆಂಗಳೂರಿನ ಸ್ಟಾರ್ಟ್‌ಅಪ್ ಉದ್ಯಮಿಯೊಬ್ಬರು ತಮ್ಮ ಹುಟ್ಟುಹಬ್ಬದ ಪಾರ್ಟಿಗಾಗಿ ವಿಜಯ್ ಮಲ್ಯರ ಕಿಂಗ್‌ಫಿಶರ್ ಟವರ್ಸ್ ಪೆಂಟ್‌ಹೌಸ್‌ ಅನ್ನು ಒಂದು ರಾತ್ರಿ ಬಾಡಿಗೆಗೆ ಕೇಳಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಕಳೆದ 10 ವರ್ಷಗಳಿಂದ ಖಾಲಿ ಬಿದ್ದಿರುವ ಈ ಐಷಾರಾಮಿ ಬಂಗಲೆಯು ಸದ್ಯಕ್ಕೆ ಅಪೂರ್ಣವಾಗಿದೆ.

Read Full Story
05:01 PM (IST) Mar 10

Karnataka News Live 10 March 2026ಜೈಲಿನಲ್ಲಿರೋ ಅಮ್ಮನ ಬಿಟ್ಟುಬಂದು ಒಂಟಿಯಾಗಿರೋ ರಾಣಿಗೆ Bigg Boss ಗಿಲ್ಲಿ ನಟನ ಸಾಥ್​!

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ರಾಣಿ' ಧಾರಾವಾಹಿಯು, ಜೈಲಿನಲ್ಲಿರುವ ತಾಯಿಯಿಂದ ಬೇರ್ಪಟ್ಟ ಮಗುವಿನ ಕಣ್ಣೀರಿನ ಕಥೆಯಾಗಿದೆ. ಆರು ವರ್ಷಗಳ ನಂತರ ಜೈಲಿನಿಂದ ಹೊರಬಂದ ರಾಣಿಯ ಒಂಟಿ ಪಯಣ ಮತ್ತು ಅವಳ ತಂದೆಯೇ ಖಳನಾಯಕನಾಗಿರುವ ಈ ಕಥೆಯು ತೆಲುಗಿನ 'ಚಿನ್ನಿ' ಧಾರಾವಾಹಿಯ ರಿಮೇಕ್ ಆಗಿದೆ.
Read Full Story
04:41 PM (IST) Mar 10

Karnataka News Live 10 March 2026ಮೂರು ವರ್ಷದ ಮಗು ಜೊತೆ ಆಟೋ ಓಡಿಸೋ ಮಹಿಳೆ, ಬಿಟ್ಟ ಗಂಡನಿಗೆ ಇರಲಿ ಧಿಕ್ಕಾರ

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಟೋ ಚಾಲಕಿ ಪಕ್ಕದಲ್ಲೊಂದು ಪುಟಾಣಿ ಸೀಟ್ ಇದೆ. ಮೂರು ವರ್ಷದ ಮಗುವೊಂದು ಇಡೀ ದಿನ ಅಮ್ಮನ ಜೊತೆ ಕುಳಿತು ಆಟೋ ಪ್ರಯಾಣ ಬೆಳೆಸ್ತಾಳೆ. ಕಾರಣ ಏನು ಗೊತ್ತಾ?

Read Full Story
04:40 PM (IST) Mar 10

Karnataka News Live 10 March 2026ಅಷ್ಟಿದ್ಮೇಲೆ ನೀವು ಮಕ್ಕಳ ಎದುರು ಯಾಕೆ ಸೀರಿಯಲ್​​ ನೋಡ್ತೀರಾ? ನಟಿ ಅಮೃತಾ ರಾಮಮೂರ್ತಿ ಗರಂ

ಸೀರಿಯಲ್‌ಗಳು ಮನೆ ಹಾಳು ಮಾಡುತ್ತವೆ ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬ ಸಾಮಾನ್ಯ ಆರೋಪಗಳಿಗೆ ನಟಿ ಅಮೃತಾ ರಾಮಮೂರ್ತಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಾದರೆ ಅವರ ಮುಂದೆ ಯಾಕೆ ನೋಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

Read Full Story