ಸಿಂಧ್(ಮಾ.21): ಭಾರತ-ಪಾಕ್ ನಡುವೆ ಬಿಗುವಿನ ವಾತಾವರಣದ ಲಾಭ ಪಡೆದಿರುವ ಚೀನಾ, ಉಭಯ ರಾಷ್ಟ್ರಗಳ ಗಡಿಯಿಂದ ಕೇವಲ 90 ಕಿಮೀ ದೂರದಲ್ಲಿ ತನ್ನ ಸೈನಿಕರನ್ನು ನೇಮಿಸಿದೆ.

ಮೂಲಗಳ ಪ್ರಕಾರ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗಡಿಯಲ್ಲಿ ಚೀನಿ ಸೈನಿಕರು ಠಿಕಾಣಿ ಹೂಡಿದ್ದಾರೆ ಎಂದು ಭಾರತೀಯ ಗುಪ್ತಚರ ವರದಿ ತಿಳಿಸಿದೆ.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ರಕ್ಷಣೆಗೆ ಪೀಪಲ್ಸ್ ಲಿಬರೇಶನ್ ಆರ್ಮಿ ಸಿಂಧ್ ಪ್ರಾಂತ್ಯಕ್ಕೆ ಕಾಲಿಟ್ಟಿದೆ ಎಂದು ಹೇಳಲಾಗಿದೆ.

ಅಲ್ಲದೇ ಸಿಂಧ್ ಪ್ರಾಂತ್ಯದ ಥಾರ್ ನಲ್ಲಿರುವ ತನ್ನ ಕಲ್ಲಿದ್ದಲು ಗಣಿಗಳ ರಕ್ಷಣೆಗಾಗಿ ಸೆನ್ಯ ಕಳುಹಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಆದರೆ ಚೀನಾ ಸೈನ್ಯ ಭಾರತದ ಗಡಿ ಸಮೀಪ ಬಂದಿರುವುದು ಚಿಂತೆಗೆ ಕಾರಣವಾಗಿದ್ದು, ಚೀನಿ ಸೈನಿಕರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.