Asianet Suvarna News Asianet Suvarna News

ನಮಗೆ ರಷ್ಯಾದ S-400: ಪಾಕ್‌ಗೆ ಚೀನಾದ ಡ್ರೋಣ್!

ಚೀನಾ-ಪಾಕ್ ಮಧ್ಯೆ ಮಹತ್ವದ ರಕ್ಷಣಾ ಒಪ್ಪಂದ! ಪಾಕ್‌ಗೆ ಚೀನಾದಿಂದ 48 ಮಿಲಿಟರಿ ಡ್ರೋಣ್ ಗಳ ಮಾರಾಟ! ಭಾರತ-ರಷ್ಯಾ ರಕ್ಷಣಾ ಒಪ್ಪಂದಕ್ಕೆ ಪ್ರತಿಯಾಗಿ ಚೀನಾ-ಪಾಕ್ ಒಪ್ಪಂದ! ಪಾಕ್ ಗೆ ವಿಂಗ್ ಲೂಂಗ್ 2 ಡ್ರೋಣ್ ಮಾರಾಟ ಮಾಡಿದ ಚೀನಾ! ಮಾನವ ರಹಿತ ವಿಮಾನ ವ್ಯವಸ್ಥೆ ಹೊಂದಿರುವ ವಿಂಗ್ ಲೂಂಗ್ 2

China decides to sell high-end military drones to Pakistan
Author
Bengaluru, First Published Oct 9, 2018, 5:27 PM IST

ಬಿಜಿಂಗ್(ಅ.9): ‘ದುಷ್ಮನ್ ಕಾ ದುಷ್ಮನ್ ಮೇರಾ ದೋಸ್ತ್’ ಅನ್ನೋದು ಚೀನಾದ ವಿದೇಶಾಂಗ ನೀತಿಯ ಬಹುಮುಖ್ಯ ಅಂಗ. ಅದರಂತೆ ಭಾರತದ ಮೇಲೆ ಸದಾ ವೈರತ್ವ ಸಾಧಿಸುವುದರಲ್ಲೇ ಖುಷಿಪಡುವ ಚೀನಾ, ನಮ್ಮ ಬದ್ಧ ವೈರಿ ಪಾಕಿಸ್ತಾನಕ್ಕೆ ಹತ್ತಿರವಾಗಿರುವುದು ಗುಟ್ಟಿನ ವಿಷಯವೇನಲ್ಲ.

ಅದರಂತೆ ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿ ಕಟ್ಟಲು ಇರುವ ಎಲ್ಲಾ ಅವಕಾಶವನ್ನೂ ಚೀನಾ ಬಳಸಿಕೊಳ್ಳುತ್ತದೆ. ಇದಕ್ಕೆ ಉದಹಾರಣೆ ಎಂಬಂತೆ ಇತ್ತೀಚಿಗಷ್ಟೇ ಭಾರತ-ರಷ್ಯಾ ನಡುವೆ ಬಹು ಮುಖ್ಯ ರಕ್ಷಣಾ ಒಪ್ಪಂದ ನಡೆದಿದ್ದು, ಇದಕ್ಕೆ ಪ್ರತಿಯಾಗಿ ಚೀನಾ-ಪಾಕ್ ಕೂಡ ಮಹತ್ವದ ರಕ್ಷಣಾ ಒಪ್ಪಂದ ಮಾಡಿಕೊಂಡಿವೆ.

ಕ್ಪಾಕಿಸ್ತಾನ ಪೋಷಣೆಗೆ ಮಾಸ್ಟರ್ ಪ್ಲಾನ್ ರೂಪಿಸುವ ಚೀನಾ, ರಷ್ಯಾದೊಂದಿಗೆ ಭಾರತ ಎಸ್-400 ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಅತ್ಯಾಧುನಿಕ 48 ಮಿಲಿಟರಿ ಡ್ರೋಣ್ ಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಮುಂದಾಗಿದೆ. 

ಪಾಕಿಸ್ತಾನಕ್ಕೆ ಮಾರಾಟ ಮಾಡಲು ಚೀನಾ ನಿರ್ಧರಿಸಿರುವ ಈ ಅತ್ಯಾಧುನಿಕ ಡ್ರೋಣ್ ಗಳು ಎಲ್ಲಾ ಮಾದರಿಯ ವಾತಾವರಣದಲ್ಲಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವುಳ್ಳವಾಗಿವೆ. 

ಚೀನಾದ ಈ ಅತ್ಯಾಧುನಿಕ ಡ್ರೋಣ್ ಮಾರಾಟ ಕುರಿತಂತೆ ಸ್ವತಃ ಪಾಕಿಸ್ತಾನ ವಾಯುಸೇನೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ಪಾಕಿಸ್ತಾನ ವಾಯುಸೇನೆಯಲ್ಲಿ ಇದು ಅತ್ಯಂತ ದೊಡ್ಡ ಒಪ್ಪಂದ ಎಂದು ಹೇಳಿಕೊಂಡಿದೆ. 

ಚೀನಾ ತನ್ನ ವಿಂಗ್ ಲೂಂಗ್ 2 ಡ್ರೋಣ್ ಪಾಕಿಸ್ತಾನಕ್ಕೆ ಮಾರಾಟ ಮಾಡಲು ಮುಂದಾಗಿದ್ದು, ಉತ್ತಮ ರೀತಿಯ ಸ್ಥಳಾನ್ವೇಷಣೆ, ಮಾನವ ರಹಿತ ವಿಮಾನ ವ್ಯವಸ್ಥೆಯನ್ನು ಹೊಂದಿದೆ.

ರಷ್ಯಾದೊಂದಿಗೆ ಎಸ್-400 ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರತ ವಾಯುಸೇನಾ ವಿಭಾಗದಲ್ಲಿ ಮತ್ತಷ್ಟು ಶಕ್ತಿಶಾಲಿಯಾಗುತ್ತಿದ್ದು, ಇದೀಗ ಚೀನಾಗೆ ಭಯ ಶುರುವಾಗಿದೆ. ಇದೇ ಕಾರಣಕ್ಕೆ ಭಾರತದ ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ಮಿಲಿಟರಿ ಸಹಾಯಕ್ಕೆ ಚೀನಾ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Follow Us:
Download App:
  • android
  • ios