ಬಿಜಿಂಗ್(ಅ.01): ಚೀನಿ ಕಮ್ಯೂನಿಸ್ಟ್ ಸರ್ಕಾರ ತನ್ನ 70ನೇ ವರ್ಷಾಚರಣೆ ಆಚರಿಸುತ್ತಿದ್ದು, ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದಲ್ಲಿ ರಾಷ್ಟ್ರೀಯ ದಿನಾಚರಣೆ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ಇನ್ನು ರಾಷ್ಟ್ರೀಯ ದಿನಾಚರಣೆ ನಿಮಿತ್ತ ಚೀನಾ ಸಶಸ್ತ್ರ ಪಡೆಗಳು ತಮ್ಮ ಶಕ್ತಿ ಪ್ರದರ್ಶನ ನಡೆಸಿದವು. ಈ ವೇಳೆ ಕೇವಲ 30  ನಿಮಿಷದಲ್ಲಿ  ಅಮೆರಿಕ ತಲುಪಬಲ್ಲ DF-41 ಮಿಸೈಲ್ ನ್ನು ಪ್ರದರ್ಶಿಸಲಾಯಿತು.

ಒಟ್ಟು 9,320 ಮೈಲು (15,000 ಕಿ.ಮೀ) ವ್ಯಾಪ್ತಿಯ DF-41 ಮಿಸೈಲ್ ಇಡೀ ವಿಶ್ವದಲ್ಲೇ ಅತ್ಯಂತ ಪ್ರಬಲ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಒಟ್ಟು 10 ಪರಮಾಣು ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ DF-41 ಮಿಸೈಲ್, ಕೇವಲ ಅರ್ಧ ಗಂಟೆಯಲ್ಲಿ ಅಮೆರಿಕದ ಮೇಲೆ ದಾಳಿ ಮಾಡಬಹುದು.

ಈ ವೇಳೆ ಮಾತನಾಡಿದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಚೀನಾ ಮತ್ತು ಚೀನಿಯರನ್ನು ತಡೆಯುವ ಶಕ್ತಿ ಈ ಜಗತ್ತಿನಲ್ಲಿ ಇಲ್ಲ ಎಂದು ಹೂಂಕರಿಸಿದರು. 

ಅಕ್ಟೋಬರ್ 01ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;