ಬೀಜಿಂಗ್(ಡಿ.2): ಬರೋಬ್ಬರಿ 20 ವರ್ಷಗಳ ಹಿಂದೆ ಅಪರಾ ಎಂದು ಸಾಬೀತಾಗಿ ಮರಣದಂಡನೆ ಗುರಿಯಾದ ವ್ಯಕ್ತಿ ಆರೋಪಿಯೇ ಅಲ್ಲ, ಆತ ನಿರಪರಾಧಿ ಎಂದು ಚೀನಾ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅತ್ಯಾಚಾರ ಹಾಗೂ ಹತ್ಯೆ ಆರೋಪದ ಮೇಲೆ ಶಿಕ್ಷೆಗೊಳಗಾದ 20 ವರ್ಷದ ನೈ ಶುಬಿನ್‌ಗೆ 1995ರಲ್ಲಿ ಗಲ್ಲು ಶಿಕ್ಷೆಯಾಗಿತ್ತು. ಎರಡನೇ ಸರ್ಕ್ಯೂಟ್ ನ್ಯಾಯಾಲಯದಲ್ಲಿ ಸುಪ್ರೀಂ ನ್ಯಾಯಾಧೀಶರ ನೇತ್ತೃತ್ವದಲ್ಲಿ ನಡೆದ ವಿಚಾರಣೆ ವೇಳೆ ಶುಬಿನ್ ನಿರಪರಾಧಿ ಎಂಬ ಬದಲಾದ ತೀರ್ಪು ಪ್ರಕಟವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. 2005ರಲ್ಲಿ ಮಹಿಳೆಯ ಅತ್ಯಾಚಾರ ಹಾಗೂ ಹತ್ಯೆಗೈದ ನಿಜವಾದ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ತೀರ್ಪಿನ ನಂತರ ಶುಬಿನ್ ಪೋಷಕರು ದುಖಿಃತರಾದ ಭಾವನಾತ್ಮಕ ಘಟನೆಯೂ ನಡೆದಿದೆ ಎಂದು ವರದಿ ಹೇಳಿದೆ. ಕಮ್ಯುನಿಸ್ಟ್ ದೇಶದ ನ್ಯಾಯಾಂಗ ವ್ಯವಸ್ಥೆಯಿಂದ ಇಂಥ ಘಟನೆ ನಡೆದಿದೆ ಎನ್ನಲಾಗಿದೆ.