ಚೀನಾದ 3 ತಂತ್ರಗಳು:1) ಯಾವುದೇ ದೇಶದ ಜತೆ ಸಂಘರ್ಷ ಉದ್ಭವವಾದಾಗ ಸಾರ್ವಜನಿಕ ಅಭಿಪ್ರಾಯ/ಮಾಧ್ಯಮಗಳನ್ನು ಬಳಸಿಕೊಂಡು ಸಮರ ಸಾರುವುದು2) ಮಾನಸಿಕ ಯುದ್ಧಕ್ಕಿಳಿಯುವುದು3) ಕಾನೂನು ಸಮರಕ್ಕಿಳಿಯುವುದು

ನವದೆಹಲಿ(ಆ. 14): ಭೂತಾನ್'ಗೆ ಸೇರಿದ, ಸಿಕ್ಕಿಂ ಸಮೀಪದ ವಿವಾದಿತ ಡೋಕ್ಲಾಮ್ ಪ್ರದೇಶ ವಿಚಾರವಾಗಿ ಭಾರತಕ್ಕೆ ಒಂದರ ಹಿಂದರಂತೆ ಬೆದರಿಕೆ ಹಾಕುತ್ತಿರುವ ಚೀನಾ, ತನ್ನ 'ಮೂರು ಸಮರ' ತಂತ್ರಗಳನ್ನು ಪ್ರಯೋಗಿಸಲು ಆರಂಭಿಸಿರುವಂತಿದೆ.

ಯಾವುದೇ ದೇಶದ ಜತೆ ಸಂಘರ್ಷ ಉದ್ಭವವಾದಾಗ ಸಾರ್ವಜನಿಕ ಅಭಿಪ್ರಾಯ/ಮಾಧ್ಯಮಗಳನ್ನು ಬಳಸಿಕೊಂಡು ಸಮರ ಸಾರುವುದು, ಮಾನಸಿಕ ಯುದ್ಧಕ್ಕಿಳಿಯುವುದು ಹಾಗೂ ಕಾನೂನು ಸಮರಕ್ಕಿಳಿಯುವುಉದ ಚೀನಾದ ಈ 3 ತಂತ್ರಗಾರಿಕೆ.

ಈ ಹಿಂದೆ ದಕ್ಷಿಣ ಚೀನಾ ಸಮುದ್ರ ವಿವಾದ ಸೃಷ್ಟಿಯದಾಗಲೂ ಇವೇ ತಂತ್ರಗಳನ್ನು ಚೀನಾ ಬಳಸಿಕೊಂಡಿತ್ತು. ಅವನ್ನೇ ಈಗ ಭಾರತದ ಮೇಲೂ ಪ್ರಯೋಗಿಸುತ್ತಿದೆ ಎಂದು ಭಾರತದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಡೋಕ್ಲಾಮ್ ಬಿಕ್ಕಟ್ಟು ಸೃಷ್ಟಿಯಾದಾಗ ಚೀನಾ ಮಾಧ್ಯಮಗಳು, ವಿದೇಶಾಂಗ ರಕ್ಷಣಾ ಸಚಿವಾಲಯ ಹಾಗೂ ವಿದೇಶಾಂಗ ಮಂತ್ರಿ ಭಾರತದ ಮೇಲೆ ಮುಗಿಬಿದ್ದು ಹೇಳಿಕೆ, ಪ್ರಕಟಣೆಗಳು ಹಾಗೂ ಅಭಿಪ್ರಾಯ ನೀಡಿದ್ದು ಇದಕ್ಕೆ ನಿದರ್ಶನ.

ಚೀನಾದ 3 ತಂತ್ರಗಳು:
1) ಯಾವುದೇ ದೇಶದ ಜತೆ ಸಂಘರ್ಷ ಉದ್ಭವವಾದಾಗ ಸಾರ್ವಜನಿಕ ಅಭಿಪ್ರಾಯ/ಮಾಧ್ಯಮಗಳನ್ನು ಬಳಸಿಕೊಂಡು ಸಮರ ಸಾರುವುದು
2) ಮಾನಸಿಕ ಯುದ್ಧಕ್ಕಿಳಿಯುವುದು
3) ಕಾನೂನು ಸಮರಕ್ಕಿಳಿಯುವುದು

ಅಸಭ್ಯ ವರ್ತನೆ:
ಬೀಜಿಂಗ್: ಚೀನಾದ ಶಾಘೈ ಪುಡೊಂಗ್ ವಿಮಾನ ನಿಲ್ದಾಣದಲ್ಲಿ ಚೀನೀಯರು ತಮ್ಮ ಜತೆ ಅಸಭ್ಯವಾಗಿ ನಡೆದುಕೊಂಡರು ಎಂದು ಕೆಲವು ಭಾರತೀಯರು ಆಪಾದಿಸಿದ್ದಾರೆ, ಈ ಬಗ್ಗೆ ಚೀನಾ ವಿದೇಶಾಂಗ ಕಚೇರಿಯಲ್ಲಿ ಭಾರತೀಯ ವಿದೇಶ ಇಲಾಖೆ ಗಮನ ಸೆಳೆದಿದೆ.

epaperkannadaprabha.com