ಕನ್ನಡದ ಟೀವಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿ ನೋಡಿದ 2 ನೇ ತರಗತಿ ವಿದ್ಯಾರ್ಥಿನಿ ಅದೇ ರೀತಿ ತಾನೂ ಬೆಂಕಿ ಹಚ್ಚಿಕೊಂಡು ನರ್ತಿಸಲು ಮುಂದಾಗಿ ಸಾವನ್ನಪ್ಪಿದ್ದ ಘಟನೆ ಜನರ ಮನಸ್ಸಿಂದ ಮರೆಯಾಗುವ ಮುನ್ನವೇ ಅಂಥದ್ದೇ ಘಟನೆಗೆ ಉತ್ತರ ಪ್ರದೇಶ ರಾಜಧಾನಿ ಲಖನೌ ಸಾಕ್ಷಿಯಾಗಿದೆ.

ಲಖನೌ (ಡಿ.29): ಕನ್ನಡದ ಟೀವಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿ ನೋಡಿದ 2 ನೇ ತರಗತಿ ವಿದ್ಯಾರ್ಥಿನಿ ಅದೇ ರೀತಿ ತಾನೂ ಬೆಂಕಿ ಹಚ್ಚಿಕೊಂಡು ನರ್ತಿಸಲು ಮುಂದಾಗಿ ಸಾವನ್ನಪ್ಪಿದ್ದ ಘಟನೆ ಜನರ ಮನಸ್ಸಿಂದ ಮರೆಯಾಗುವ ಮುನ್ನವೇ ಅಂಥದ್ದೇ ಘಟನೆಗೆ ಉತ್ತರ ಪ್ರದೇಶ ರಾಜಧಾನಿ ಲಖನೌ ಸಾಕ್ಷಿಯಾಗಿದೆ.

ಟೀವಿಯಲ್ಲಿ ಪ್ರಸಾರವಾಗುವ ಪೌರಾಣಿಕ ಧಾರವಾಹಿಯಲ್ಲಿ ಕಾಳಿ ಪಾತ್ರ ರೀತಿಯಾಗಿ ಅಭಿನಯಿಸಲು ಮುಂದಾದ 9 ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಈ ಘಟನೆಯಲ್ಲಿ ಮಡಿದ ಸಂತ್ರಸ್ತ ಬಾಲಕನನ್ನು ರಂಜನ್(೧೪) ಎಂದು ಹೇಳಲಾಗಿದೆ. ಕಾಳಿಯಂತೆ ಬಾಯಿಯಿಂದ ನಾಲಿಗೆ ಹೊರ ಹಾಕಲು ಕುತ್ತಿಗೆಗೆ ಬಿಗಿಯಾಗಿ ಬಟ್ಟೆ ಕಟ್ಟಿಕೊಂಡಿದ್ದ. ಈ ವೇಳೆ ಉಸಿರಾಟ ತೊಂದರೆಗೆ ಸಿಲುಕಿದ ಬಾಲಕನನ್ನು ಆತನ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ, ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.