ಆನೇಕಲ್ ತಾಲೂಕಿನ ಕರ್ಪೂರ ಗೇಟ್ ಬಳಿ ಅಸ್ಸಾಂ ಮೂಲದ ದಂಪತಿಯ 3 ವರ್ಷದ ಪುತ್ರ ರಹೀಂ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ.

ಆನೆಕಲ್(ಏ.30): ಇದು ರಾಜ್ಯದ ಜನತೆ ತಲೆ ತಗ್ಗಿಸುವ ಘಟನೆ. ಓಡಿಶಾ ಅಥವಾ ಅಸ್ಸಾಂ ನಂತಹ ಹೊರ ರಾಜ್ಯದಲ್ಲಿ ನಡೆದ ಕರಾಳ ದುರಂತ. ರಾಜ್ಯದಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಯ ಚಿತ್ರಣ ಇದು.

ಸತ್ತವರಂತೆ ಬದುಕುತ್ತಿದ್ದಾರೆ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ. ಆನೇಕಲ್ ತಾಲೂಕು ಆಸ್ಪತ್ರೆಯಲ್ಲಿ ನರಳುತ್ತಿರುವ ಮಗುವನ್ನ ತಿರುಗಿಯೂ ನೋಡದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬಾಗಿಲನ್ನೇ ತೆರೆಯದೆ ಹೊರಗೆ ನಿಲ್ಲಿಸಿ ಒಂದು ಗಂಟೆ ನಂತರ ಬಂದು ಮಗುವಿನ ಸತ್ತಿದೆ ಎಂದ ಹೇಳಿ ತಮ್ಮ ದುಷ್ಟತನದ ಪರಮಾವಧಿ ಮೆರೆದಿದ್ದಾರೆ. ಪಾಪ ಮೃತ ಮಗುವಿನ ತಂದೆಗೆ ತನ್ನ ಮಗುವನ್ನು ಕೊಂಡೊಯ್ಯಲು ಆ್ಯಂಬುಲೆನ್ಸ್ ಕೂಡ ನೀಡಲಿಲ್ಲ.ನೊಂದ ಪೋಷಕರು ಮೃತಮಗುವನ್ನು ಬೈಕಿನಲ್ಲಿಯೇ ಸಾಗಿಸಿದ್ದಾರೆ.

ನಡಿದಿದ್ದಾರೂ ಏನು ?

ಆನೇಕಲ್ ತಾಲೂಕಿನ ಕರ್ಪೂರ ಗೇಟ್ ಬಳಿ ಅಸ್ಸಾಂ ಮೂಲದ ದಂಪತಿಯ 3 ವರ್ಷದ ಪುತ್ರ ರಹೀಂ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗೆಂದು ಆನೇಕಲ್ ತಾಲೂಕು ಆಸ್ಪತ್ರೆಗೆ ಪೋಷಕರು ಬಂದಿದ್ದರು. ಆದರೆ ವೈದ್ಯರು ಕನಿಷ್ಠ ಮಾನವೀಯತೆಯನ್ನು ಮೆರೆಯಲಿಲ್ಲ.