Asianet Suvarna News Asianet Suvarna News

ಚಿಕ್ಕಮಗಳೂರು ವಿಧಾನಸಭಾ ಚುನಾವಣೆ: ಅಖಾಡಕ್ಕಿಳಿಯುವವರು ಯಾರು? ಇಲ್ಲಿದೆ ವಿವರ

ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಅಖಾಡ ಸಜ್ಜಾಗುತ್ತಿದೆ. ಟಿಕೆಟ್ ಆಕಾಂಕ್ಷಿಗಳು ತೆರೆ ಮರೆಯಲ್ಲೇ ಕಸರತ್ತು ನಡೆಸುತ್ತಿದ್ದಾರೆ. ಸುವರ್ಣ ನ್ಯೂಸ್ ದಿನಕ್ಕೊಂದು ಜಿಲ್ಲೆಯ ಟಿಕೆಟ್ ಫೈಟ್ ನಿಮ್ಮ ಮುಂದಿಡುತ್ತಿದೆ. ಇವತ್ತು ಚಿಕ್ಕಮಗಳೂರು ಜಿಲ್ಲೆಯ ಟಿಕೆಟ್ ಫೈಟ್ ಕುರಿತ ಪಿಚ್ ರಿಪೋರ್ಟ್​ ಇಲ್ಲಿದೆ.

Chikkamagaluru Assembly Elections
  • Facebook
  • Twitter
  • Whatsapp

ಚಿಕ್ಕಮಗಳೂರು(ಎ.28): ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಅಖಾಡ ಸಜ್ಜಾಗುತ್ತಿದೆ. ಟಿಕೆಟ್ ಆಕಾಂಕ್ಷಿಗಳು ತೆರೆ ಮರೆಯಲ್ಲೇ ಕಸರತ್ತು ನಡೆಸುತ್ತಿದ್ದಾರೆ. ಸುವರ್ಣ ನ್ಯೂಸ್ ದಿನಕ್ಕೊಂದು ಜಿಲ್ಲೆಯ ಟಿಕೆಟ್ ಫೈಟ್ ನಿಮ್ಮ ಮುಂದಿಡುತ್ತಿದೆ. ಇವತ್ತು ಚಿಕ್ಕಮಗಳೂರು ಜಿಲ್ಲೆಯ ಟಿಕೆಟ್ ಫೈಟ್ ಕುರಿತ ಪಿಚ್ ರಿಪೋರ್ಟ್​ ಇಲ್ಲಿದೆ.

ಕಾಫಿನಾಡಲ್ಲಿ ಶುರುವಾಗಿದೆ ಟಿಕೆಟ್ ಲೆಕ್ಕಾಚಾರ

ಕಾಫಿನಾಡು ಚಿಕ್ಕಮಗಳೂರು ಐದು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಜಿಲ್ಲೆ. ಇಲ್ಲಿನ ಜನ ಒಂದು ಪಕ್ಷಕ್ಕೆ ಕಟ್ಟುಬಿದ್ದಿಲ್ಲ. ಕಾಲ ಬದಲಾದಂತೆ ರಾಜಕೀಯ ಚಿತ್ರಣ ಬದಲಾಗುತ್ತಾ ಬಂದಿದೆ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ವರ್ಚಸ್ಸು ಪ್ರಧಾನ.. ಈ ಬಾರಿಯೂ ಕೂಡ ಜಿಲ್ಲೆಯಲ್ಲಿ ಮೂರು ಪ್ರಮುಖ ಪಕ್ಷಗಳಲ್ಲಿ ಆಕಾಂಕ್ಷಿಗಳ ರೇಸ್ ದೊಡ್ಡದಿದೆ.

ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಫೈಟ್!

ಹ್ಯಾಟ್ರಿಕ್‌ ಗೆಲವು ಸಾಧಿಸಿರುವ ಸಿ.ಟಿ. ರವಿ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ ಪಕ್ಷದಲ್ಲಿ ವಿಧಾನಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಡಿ.​ಎಲ್‌. ವಿಜಯಕುಮಾರ್‌, ಜಿಲ್ಲಾ ಪ್ರಧಾನ ಕಾರ್ಯ​ದರ್ಶಿ ಬಿ.ಎಂ. ಸಂದೀಪ್‌, ಜಿಲ್ಲಾ ಮಾಜಿ ಅಧ್ಯ​ಕ್ಷ ಎಂ.ಎಲ್‌. ಮೂರ್ತಿ, ಅರಣ್ಯ ಮತ್ತು ವಸತಿ ವಿಹಾರಧಾಮ ನಿಗಮದ ಎ.ಎನ್‌. ಮಹೇ​ಶ್‌ ಅಭ್ಯರ್ಥಿಗಳು ರೇಸ್​ನಲ್ಲಿದ್ದಾರೆ.. ಜೆಡಿಎಸ್‌ನಿಂದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಎಚ್‌. ದೇವರಾಜ್‌ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ಕಡೂರು ಕ್ಷೇತ್ರದ ಟಿಕೆಟ್ ಫೈಟ್!

ಜೆಡಿಎಸ್‌ನಿಂದ ವೈ.ಎಸ್​.ವಿ ದತ್ತ ಬಿಟ್ಟರೆ ಧರ್ಮೇಗೌಡ ಅಭ್ಯರ್ಥಿ ಎಂಬ ಮಾತುಗಳು ಕೇಳಿ ಬರುತ್ತಿದೆ.ಇನ್ನು ಬಿಜೆಪಿಯಲ್ಲಿ ಬೆಳ್ಳಿಪ್ರಕಾಶ್‌, ಗಿರೀಶ್‌ ಉಪ್ಪಾರ್‌ ರೇಸ್​ನಲ್ಲಿದ್ದರೆ, ಕಾಂಗ್ರೆಸ್​ನಿಂದ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್‌, ಕೆಂಪರಾಜ್‌, ಮಹೇಶ್‌ ಒಡೆಯರ್‌, ಶರತ್‌ ಕೃಷ್ಣಮೂರ್ತಿ ಹೀಗೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ..

ತರೀಕೆರೆ ಕ್ಷೇತ್ರದ ಟಿಕೆಟ್ ಫೈಟ್!

ಕಾಂಗ್ರೆಸ್​ನಿಂದ ಹಾಲಿ ಶಾಸಕ ಶ್ರೀನಿ​ವಾಸ್‌ ಅವರಿಗೆ ಮತ್ತೆ ಟಿಕೆಟ್‌ ಸಿಗಲಿದೆ. ಆದ್ರೂ ದೋರನಾಳ್‌ ಪರ​ಮೇಶ್‌, ಮಾಜಿ ಶಾಸಕ ಎಸ್‌.ಎಂ. ನಾಗರಾಜ್‌, ಧ್ರುವ​ಕುಮಾರ್‌ ರೇಸ್​ನಲ್ಲಿದ್ದಾರೆ. ಬಿಜೆಪಿ​ಯಲ್ಲಿ ಮಾಜಿ ಶಾಸಕ ಡಿ.ಎಸ್‌. ಸುರೇಶ್‌ ಹಾಗೂ ಗೋಪಿಕೃಷ್ಣ ಹೆಸರು ಕೇಳಿ ಬರುತ್ತಿದೆ. ಜೆಡಿಎಸ್‌ನಿಂದ ಮಾಜಿ ಶಾಸಕ ಟಿ.ಎಚ್‌. ಶಿವಶಂಕರ್‌ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

ಮೂಡಿಗೆರೆ ಕ್ಷೇತ್ರದ ಟಿಕೆಟ್ ಫೈಟ್!

ಮೂಡಿಗೆರೆ ಕ್ಷೇತ್ರದಲ್ಲಿ ಜೆಡಿಎಸ್‌ನಿಮದ ಹಾಲಿ ಶಾಸಕ ಬಿ.ಬಿ. ನಿಂಗಯ್ಯ ಮತ್ತೊಮ್ಮೆ ಸ್ಪರ್ಧೆಗಿಳಿಯುತ್ತಿದ್ರೆ, ಕಾಂಗ್ರೆಸ್​ನಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸತ್‌ ಪ್ರವೇಶಿಸಿರುವ ಬಿ.ಎನ್‌. ಚಂದ್ರಪ್ಪ ಹಾಗೂ ಪರಿಷತ್‌ ಸದಸ್ಯೆ ಮೋಟಮ್ಮ ಮಧ್ಯೆ ಫೈಟ್ ನಡೀತಿದೆ. ಇನ್ನೂ ಬಿಜೆಪಿಯಲ್ಲಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಜೊತೆಗೆ ಶಾಮಣ್ಣ ಬಣಕಲ್‌  ಹೆಸರು ಕೇಳಿ ಬರ್ತಿದೆ.

ಶೃಂಗೇರಿ ಕ್ಷೇತ್ರದ ಟಿಕೆಟ್ ಫೈಟ್!

ಸತತವಾಗಿ ಮೂರನೇ ಬಾರಿ ಗೆಲುವು ಸಾಧಿಸಿರುವ ಡಿ.ಎನ್‌. ಜೀವರಾಜ್‌ ಬಿಜೆಪಿಯಿಂದ ಮತ್ತೆ ಸ್ಪರ್ಧೆ ಮಾಡುವುದು ನಿಶ್ಚಿತ. ಜೆಡಿಎಸ್‌ನಲ್ಲಿ ಎಚ್‌.ಟಿ. ರಾಜೇಂದ್ರ ಹಾಗೂ ವೆಂಕಟೇಶ್‌ ಹೆಸರು ಕೇಳಿ ಬರ್ತಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಟಿ.ಡಿ. ರಾಜೇಗೌಡ ಸ್ಪರ್ಧೆಗೆ ತಾಯಿರಿ ನಡೆಸಿದ್ದರಾದ್ರೂ ಡಾ.ಆರತಿ ಕೃಷ್ಣ, ಡಾ.ಅಂಶುಮಂತ್‌, ಬಿ.ಸಿ. ಗೀತಾ ಹಾಗೂ ಕೆಪಿಸಿಸಿ ಕಿಸಾನ್‌ ಘಟಕದ ರಾಜ್ಯಾಧ್ಯಕ್ಷ ಸಚಿನ್‌ ಮಿಗಾ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

Follow Us:
Download App:
  • android
  • ios