ಪೂಜಾಳ ಅಪ್ಪ ಪವನ್ ಗಾಂಧಿ ಜಯನಗರ ಮತ್ತು ಬನಶಂಕರಿಯ ಆದೀಶ್ವರ್ ಶೋರೂಂಗಳಲ್ಲಿ ಎಂಟು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡಿ ಆ ಮೊತ್ತಕ್ಕೆ ಚೆಕ್ ನೀಡಿದ್ದ. ಆದರೆ ಆ ಚೆಕ್ ಬೌನ್ಸ್ ಆಗಿತ್ತು.
ಬೆಂಗಳೂರು (ಸೆ.22): ಪೂಜಾಳ ಅಪ್ಪ ಪವನ್ ಗಾಂಧಿ ಜಯನಗರ ಮತ್ತು ಬನಶಂಕರಿಯ ಆದೀಶ್ವರ್ ಶೋರೂಂಗಳಲ್ಲಿ ಎಂಟು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡಿ ಆ ಮೊತ್ತಕ್ಕೆ ಚೆಕ್ ನೀಡಿದ್ದ. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಶೋರೂಂ ಸಿಬ್ಬಂದಿ ಫೋನ್ ಮಾಡಿದರೂ ಪವನ್ ಸಿಕ್ಕಿರಲಿಲ್ಲ. ಕಡೆಗೂ ಬೇರೆ ದಾರಿ ಕಾಣದ ಶೋರೂಂ ಆಡಳಿತ ಮಂಡಳಿ 23 ನೇ ಎಸಿಎಂಎಂ ಕೋರ್ಟಿನಲ್ಲಿ ದೂರು ದಾಖಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ಕೈಗೇ ಸಿಗದ ಪವನ್ ಗಾಂಧಿಯನ್ನು ಬಂಧಿಸುವಂತೆ ವಾರೆಂಟ್ ಜಾರಿ ಮಾಡಿತ್ತು. ಆದರೆ ಈ ಅರೆಸ್ಟ್ ವಾರೆಂಟ್ ಹಿಡಿದು ಹೋದ ಪೊಲೀಸರಿಗೆ ಬಿಗ್ ಶಾಕ್ ಕಾದಿತ್ತು. ಯಾಕೆಂದರೆ ಪೂಜಾ ಗಾಂಧಿ ಪವನ್ ಗಾಂಧಿ ಸಮೇತ ವಾಸವಿದ್ದ ಅಪಾರ್ಟ್ಮೆಂಟ್ ಮೂರು ತಿಂಗಳ ಹಿಂದೆಯೇ ಖಾಲಿಯಾದ ವಿಚಾರ ತಿಳಿಯಿತು. ಇದೀಗ ಪೂಜಾ ತಂದೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಮೂಲಕ ಪೂಜಾ ಕೂಡಾ ಓಡಿ ಹೋಗಿರೋ ವಿಚಾರ ಖಾತರಿಯಾದಂತಾಗಿದೆ! ಅತ್ತ ಸಾಲುಸಾಲಾಗಿ ಚಿತ್ರ ಮಾಡೋದಾಗಿ ಹೇಳಿಕೊಂಡು ಕಾಸೆತ್ತಿದ ಪೂಜಾ ಗಾಂಧಿ ಯಾರ ಕೈಗೂ ಸಿಗದೆ ಕತೆ ಬಿಡುತ್ತಿದ್ದಾಳೆ. ಅದರ ಬೆನ್ನಿಗೇ ಈ ಮಹಾನ್ ನಟಿಯ ಜನ್ಮದಾತನನ್ನು ಬೆಂಡೆತ್ತಲು ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಹುಡುಕಾಡಲಾರಂಭಿಸಿದ್ದಾರೆ. ಆದರೆ ಪೂಜಾಳ ಜನ್ಮದಾತ ಪವನ್ ಗಾಂಧಿಯ ಪತ್ತೆಯಿಲ್ಲ!
