ವಾರಾಣಸಿ[ಮೇ.27]:  ಮೇ 27: ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯ ಗಳಿಸಿದ ಬಳಿಕ ಮೊದಲ ಬಾರಿ ನರೇಂದ್ರ ಮೋದಿ ತಮ್ಮ ಸ್ವಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದ್ದಾರೆ. ಬೃಹತ್ ರೋಡ್ ಶೋ ಮೂಲಕ ವರಾಣಸಿಗೆ ಪ್ರವೇಶಿಸಿದ ಮೋದಿ, ಇಲ್ಲಿನ ಕಾಶಿ ವಿಶ್ವನಾಥ ದೇಗುಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರನ್ನುದ್ದೆಶಿಸಿ ಮಾತನಾಡಿದ ಮೋದಿ, ಬಿಜೆಪಿ ಗೆಲುವಿಗೆ ಬೆನ್ನೆಲುಬಾಗಿ ನಿಂತಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

"

ವಾರಣಾಸಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ 'ಕಾರ್ಯಕರ್ತರು ಪಕ್ಷಕ್ಕೆ ದೊಡ್ಡ ಶಕ್ತಿಯಿದ್ದಂತೆ , ಅವರು ಒಟ್ಟುಗೂಡಿದರೆ ದೇಶವೇ ಗೆಲ್ಲುತ್ತದೆ. ಏಪ್ರಿಲ್ 25 ಕ್ಕೆ ನಾನು ವಾರಾಣಸಿಗೆ ಬಂದಿದ್ದಾಗ ಒಂದು ತಿಂಗಳುಗಳ ಕಾಲ ಈ ಕಡೆ ತಲೆ ಹಾಕಬಾರದು ಎಂದು ವಾರಾಣಸಿ ಕಾರ್ಯಕರ್ತರು ಆದೇಶಿಸಿದ್ದರು. ಕಾರ್ಯಕರ್ತರ ಆದೇಶವನ್ನು ನಾನು ಪಾಲಿಸಿದ್ದೇನೆ. ಇಂದು ಗೆಲುವಿನ ಬಳಿಕ ಬಂದಿದ್ದೇನೆ ಇದು ಕಾರ್ಯಕರ್ತರ ಶಕ್ತಿ' ಎನ್ನುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. 

ಸ್ವಕ್ಷೇತ್ರ ವಾರಾಣಸಿಯಲ್ಲಿ ಮೋದಿ ಸಂಚಾರ: ಕಾಶಿ ವಿಶ್ವನಾಥನಿಗೆ 'ನಮೋ' ವಿಶೇಷ ಪೂಜೆ

ಇಷ್ಟೇ ಅಲ್ಲದೇ ಯಾವುದೇ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿ ಇಷ್ಟು ನಿಶ್ಚಿಂತರಾಗಿರಲು ಸಾಧ್ಯವಿಲ್ಲ, ನಾಮಪತ್ರ ಸಲ್ಲಿಸುವಾಗಲೂ ಗೆಲುವು ನಿಶ್ಚಿತವಾಗಿತ್ತು, ಮತ ಎಣಿಕೆ ಸಂದರ್ಭದಲ್ಲೂ ಗೆಲುವು ನಿಶ್ಚಿತವಾಗಿತ್ತು. ಇದಕ್ಕಾಗಿ ಮತದಾನ ದಿನ ನಾನು ಕೇದಾರನಾಥಕ್ಕೆ ಹೋಗಿ ಧ್ಯಾನದಲ್ಲಿ ಕುಳಿತಿದ್ದೆ ಎಂದು ಹೇಳಿದರು. 

ಇನ್ನು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಮೋದಿ '70 ವರ್ಷಗಳಿಂದ ಆಡಳಿತ ನಡೆಸುತ್ತಿರುವವರು ಜನರ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯಗಳನ್ನು ಹರಡಿಸುತ್ತಿದ್ದಾರೆ. ಇದನ್ನು ನಾವು ಕೊನೆಗೊಳಿಸಬೇಕು. ನವ ಭಾರತ ನಿರ್ಮಾಣದ ಸಂಕಲ್ಪ ಸಾಕಾರಗೊಳಿಸಲುನಿಟ್ಟಿನಲ್ಲಿ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರೂ ಕೆಲಸ ಮಾಡಬೇಕಿದೆ ಎಂದು ಕಮಲ ಕಾರ್ಯಕರ್ತರನ್ನು ಹುರುದುಂಬಿಸಿದ್ದಾರೆ.

ಮೋದಿ ಮತ್ತೊಮ್ಮೆ: ದೇಹ ದಂಡಿಸಿ ಹರಕೆ ತೀರಿಸಿದ ದಿವ್ಯಾಂಗ ಅಭಿಮಾನಿ!

ಇದೇ ಸಂದರ್ಭದಲ್ಲಿ ವೋಟ್ ಬ್ಯಾಂಕ್ ರಾಜಕಾರಣದ ಕುರಿತಗಿ ಉಲ್ಲೇಖಿಸಿದ ಮೋದಿ ಭಾರತದಲ್ಲಿ ಪ್ರತಿಯೊಂದನ್ನೂ ವೋಟ್ ಬ್ಯಾಂಕ್‌ನ ದೃಷ್ಟಿಯಿಂದ ನೋಡುತ್ತಾರೆ. ಸರ್ಕಾರ ಯಾವುದೇ ಕೆಲಸ ಮಾಡಿದರೂ ಇದೇ ಆರೋಪ ಮಾಡುತ್ತಾರೆ. ಆದರೆ ನಾವಿಂದು ವೋಟ್ ಬ್ಯಾಂಕ್‌ನ್ನು ಬದಿಗಿಟ್ಟು ಆಡಳಿತ ನಡೆಸಬೇಕಿದೆ. ದೇಶದ ಅಭಿವೃದ್ಧಿಯೇ ನಮ್ಮ ಮಂತ್ರವಾಗಿರಬೇಕು ಎಂದು ಕರೆ ನೀಡಿದ್ದಾರೆ

ಮೇ30 ರಂದು ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಎರಡನೇ ಅವಧಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ