ಚನ್ನಪಟ್ಟಣದಲ್ಲಿ ಕಾಂಗ್ರೆಸ್'ನಿಂದ ಎಚ್.ಎಮ್. ರೇವಣ್ಣ ! ಮೈತ್ರಿಗೆ ಸಿಎಂ ತಣ್ಣೀರು, ಡಿಕೆಶಿಗೆ ಖಡಕ್ ವಾರ್ನಿಂಗ್ ?

First Published 11, Apr 2018, 4:21 PM IST
Channapattana And CM Master Plan
Highlights

ಕುಮಾರಸ್ವಾಮಿ ಅಥವಾ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರನ್ನು ಸೋಲಿಸಲು ಡಿ.ಕೆ ಶಿವಕುಮಾರ್, ಜೆಡಿಎಸ್ ಪ್ಲಾನ್ ರೂಪಿಸಿತ್ತು.

ಚನ್ನಪಟ್ಟಣ(ಏ.11): ಹಾಲಿ ಸಚಿವ ಹಾಗೂ ಕಾಂಗ್ರೆಸ್'ನ ಹಿರಿಯ ನಾಯಕ ಹೆಚ್.ಎಂ.ರೇವಣ್ಣ ಸ್ಪರ್ಧಿಸುವ ಸಾಧ್ಯತೆಯಿದೆ.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂತ್ರವಾಗಿದ್ದು,ಪಕ್ಷದ ನೀತಿ ಮೀರಿ ಕುಮಾರಸ್ವಾಮಿ ಜೊತೆ ಕೈ ಜೊಡಿಸಲು ಮುಂದಾಗಿದ್ದ ಡಿ.ಕೆ ಶಿವಕುಮಾರ್'ಗೆ ಖಡಕ್ ವಾರ್ನಿಂಗ್ ನೀಡಿದರು ಎನ್ನಲಾಗಿದೆ. ಚೆನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಸೋಲಿಸಲು ಡಿ.ಕೆ ಶಿವಕುಮಾರ್ ಜೆಡಿಎಸ್ ಜೊತೆ ಮೈತ್ರಿ ಪ್ರಸ್ತಾಪಿಸಿದ್ದರು. ಕುಮಾರಸ್ವಾಮಿ ಅಥವಾ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರನ್ನು ಸೋಲಿಸಲು ಡಿ.ಕೆ ಶಿವಕುಮಾರ್, ಜೆಡಿಎಸ್ ಪ್ಲಾನ್ ರೂಪಿಸಿತ್ತು. ಈ‌ ಮೈತ್ರಿಗೆ ಸಿಎಂ ತಣ್ಣೀರು ಸುರಿಸಿದ್ದಾರೆ.

ಎಚ್.ಎಮ್.ರೇವಣ್ಣ ಕುರುಬ ಸಮುದಾಯಕ್ಕೆ ಸೇರಿದವರು.ಒಕ್ಕಲಿಗರ ಆಟಕ್ಕೆ ಕಡಿವಾಣ ಹಾಕಲು ತಮ್ಮ ಆಪ್ತನನ್ನ ರೇವಣ್ಣ ಕಣಕ್ಕಿಳಿಸಿ ಜೆಡಿಎಸ್ ಮೈತ್ರಿ ತಪ್ಪಿಸಲು ಸಿಎಂ ಯೋಜನೆ ರೂಪಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರನ್ನು ಜೊತೆಗಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಮಣಿಸಲು ದೇವೇಗೌಡರು ಪ್ಲಾನ್ ಮಾಡಿದ್ದರು.

ಡಿ.ಕೆ ಶಿವಕುಮಾರ್ ಅವರನ್ನು ತಣ್ಣಗಾಗಿಸುವ ಸಿದ್ದರಾಮಯ್ಯ ಪ್ಲ್ಯಾನ್ ಉಲ್ಟಾ ಆದರೂ ಆಶ್ಚರ್ಯವಿಲ್ಲ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿ ಕುರುಬ ಸಮುದಾಯದ ಎಚ್.ಎಮ್. ರೇವಣ್ಣ ಅವರನ್ನು ಕಣಕ್ಕಿಳಿಸಿದರೆ ಸಿಎಂ ವಿರುದ್ಧ ಒಕ್ಕಲಿಗರು ತಿರುಗಿ ಬೀಳಬಹುದು. ಇದರಿಂದ ಚಾಮುಂಡೇಶ್ವರಿಯಲ್ಲಿ ಸಿಎಂ ಅವರಿಗೆ ಗೆಲುವು ಕಷ್ಟವಾಗಬಹುದು.

loader