ಚಾಮರಾಜನಗರದಲ್ಲಿ ಹಸು ಮೇಯಿಸುವ ವಿಚಾರದಲ್ಲಿ ವೃದ್ಧ ಚೆನ್ನಬಸವಯ್ಯನ ಮೇಲೆ ಮೂವರು ಮಹಿಳೆಯರು ಹಲ್ಲೆ ನಡೆಸಿ, ಕಾಲು ಮುರಿದಿದ್ದರು. ಏಪ್ರಿಲ್ 22ರ ಘಟನೆಯಲ್ಲಿ ಗಾಯಗೊಂಡಿದ್ದ ಚೆನ್ನಬಸವಯ್ಯ ಏ.26ರಂದು ಸಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಆರೋಪಿಗಳು ಸಂಬಂಧಿಕರೇ ಆಗಿದ್ದು, ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಜಮೀನು ವಿವಾದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿದೆ.

ಚಾಮರಾಜನಗರ (ಮೇ.17): ಜಮೀನಿನಲ್ಲಿ ಹಸು ಮೇಯಿಸಬೇಡ ಎಂದು ಹೇಳಿದ್ದಕ್ಕೆ ವೃದ್ಧನೊಬ್ಬನ ಮೇಲೆ ಮೂವರು ಮಹಿಳೆಯರು ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವೃದ್ಧನ ಸ್ವಂತ ದಾಯಾದ ಮಕ್ಕಳೇ ಅವರಾಗಿದ್ದರೂ, ಆತನ ಮೇಲೆ ಸ್ವಲ್ಪವೂ ಕನಿಕರ ತೋರದೇ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧ ಏಪ್ರಿಲ್‌ 26 ರಂದು ಸಾವು ಕಂಡಿದ್ದ.

ಜಮೀನಿನಲ್ಲಿ ಹಸು ಮೇಯಿಸಬೇಡ ಎಂದು ಹೇಳಿದ್ದಕ್ಕೆ ಮಹಿಳೆಯರು ವೃದ್ದನ ಮೇಎ ಹಲ್ಲೆ ಮಾಡಿದ್ದಾರೆ. ವೃದ್ಧನ ಊರುಗೋಲನ್ನ ಕಿತ್ತುಕೊಂಡು ಕಾಲು ಮುರಿದ್ದರು. ಮೂರು ಮಂದಿ ನಾರಿಮಣಿಯರಿಂದ ಮೃಗೀಯ ಕೃತ್ಯ ನಡೆದಿತ್ತು.
ಸ್ವಂತ ದಾಯಾದಿ ಮಕ್ಕಳಾಗಿದ್ದರೂ ಕರುಣೆ ತೋರದೆ ಹಲ್ಲೆ ಮಾಡಿರುವ ಘಟನೆ, ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಕೊಡಿಉಗನೆ ಗ್ರಾಮದಲ್ಲಿ ನಡೆದಿದೆ.

ಏಪ್ರಿಲ್ 22 ರಂದು ಕೊಡಿಉಗನೆ ಗ್ರಾಮದದಲ್ಲಿ ನಡೆದ ಘಟನೆ ತಡವಾಗಿ ಬಂದಿದೆ. ಕೊಡಿಉಗನೆ ಗ್ರಾಮದ ಚೆನ್ನಬಸವಯ್ಯ ಹಲ್ಲೆಗೆ ಒಳಗಾಗಿದ್ದ ವೃದ್ಧ. ಅದೇ ಗ್ರಾಮದ ಸುಹಾಸಿನಿ, ನಾಗರತ್ನ, ರೋಹಿಣಿ ಎನ್ನುವ ಮಹಿಳೆಯರು ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಸಿಮ್ಸ್ ಆಸ್ಪತ್ರೆಯಲ್ಲಿ ವೃದ್ಧ ಚೆನ್ನಬಸವಯ್ಯಗೆ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೆ ವೃದ್ದ ಚೆನ್ನಬಸವಯ್ಯ ಏಪ್ರಿಲ್ 26 ರಂದು ಸಾವು ಕಂಡಿದ್ದ. 

ಪೊಲೀಸರ ನಿರ್ಲಕ್ಷ್ಯ: ವೃದ್ಧ ಸಾವು ಕಂಡಿದ್ದರೂ, ಆರೋಪಿಗಳ ವಿರುದ್ದ ಪೊಲೀಸರು ಈವರೆಗೂ ಕ್ರಮ ಕೈಗೊಂಡಿಲ್ಲ. ಆರೋಪಿಗಳು ನಮ್ಮ ಎದುರಲ್ಲೇ ಓಡಾಡಿಕೊಂಡಿದ್ದರೂ ನಾಪತ್ತೆಯಾಗಿದ್ದಾರೆಂದು ಚಾಮರಾಜನಗರ ಪೂರ್ವ ಪೊಲೀಸ್ ಠಾಣಾ ಪೊಲೀಸರು ಹೇಳುತ್ತಿದ್ದಾರೆ. ಕಾಟಾಚಾರಕ್ಕೆ ಎಫ್ ಐ ಆರ್ ದಾಖಲಿಸಿಕೊಂಡಿರುವ ಪೂರ್ವ ಠಾಣಾ ಪೊಲೀಸರ ವಿರುದ್ದ ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಹಾನಿಸಿ ಎನ್ನುವ ಹುಡುಗಿ ತವರು ಮನೆಗೆ ಬಂದಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ಈ ಮಾಹಿತಿಯನ್ನ ಪೊಲೀಸರಿಗೆ ತಿಳಿಸಿದ್ದೇವೆ. ಏ.22ಕ್ಕೆ ಸಂಜೆ 4.30ಗೆ ನಮ್ಮ ತಾತ ಜಮೀನಿಗೆ ಹೋಗಿದ್ದರು. ನಮ್ಮ ಜಮೀನಿನಲ್ಲಿ ಹಸು ಮೇಯಿಸಲು ಪಕ್ಕದ ನಾಗರತ್ನಮ್ಮ ಎನ್ನುವ ಜಮೀನಿನವರು ಬಿಟ್ಟಿದ್ದರು. ಅವರಿಗೂ-ನಮಗೂ ಜಮೀನಿನ ವಿಚಾರದಲ್ಲಿ ಕಳೆದ ಒಂದು ವರ್ಷದಿಂದ ವ್ಯಾಜ್ಯ ನಡೆಯುತ್ತಿದೆ. ಇದರ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನಮ್ಮ ತಾತನನ್ನು ಥಳಿಸಿ ಕಾಲು ಕೂಡ ಮುರಿದಿದ್ದರು. ಅದೇ ದಿನ ರಾತ್ರಿ 8 ಗಂಟೆಗೆ ಸಿಮ್ಸ್‌ನಲ್ಲಿ ಆಡ್ಮಿಟ್‌ ಮಾಡಿದ್ದೆವು. ಏ.26ಕ್ಕೆ ಆಪರೇಷನ್‌ ಮಾಡುತ್ತೇವೆ ಎಂದು ವೈದ್ಯರು ಮಾಹಿತಿ ನೀಡಿದ್ದರು. ಆದರೆ, ಆಪರೇಷನ್‌ ಮಾಡುವ ವೇಳೆ ಅವರಿಗೆ ಅನಸ್ತೇಷಿಯಾ ಕೊಟ್ಟಿದ್ದರು. ಇದರಿಂದ ಅವರಿಗೆ ಕಾರ್ಡಿಯಾಕ್‌ ಅರೆಸ್ಟ್‌ ಆಗಿ ತೀರಿ ಹೋಗಿದ್ದರು ಎಂದು ಅವರ ಮೊಮ್ಮಗ ತಿಳಿಸಿದ್ದಾರೆ.