ಬೆಂಗಳೂರು(ಸೆ.19): ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಕಳ್ಳರ ಕೈಚಳಕ ಮುಂದುವರೆದಿದೆ. ಆದರೆ ಇಂದು ಕೈಚಳಕ ತೋರಿಸಿದ ಖದೀಮನಿಗೆ ಅಸಲಿ ಚಿನ್ನದ ಬದಲು ಸಿಕ್ಕಿದ್ದು ರೋಲ್ಡ್ ಗೋಲ್ಡ್. 

ತಿಗಳರಪಾಳ್ಯದ ಬಾಲಾಜಿನಗರದಲ್ಲಿ ಮಹಿಳೆಯ ತಾಳಿ ಜೊತೆ ರೋಲ್ಡ್ ಗೋಲ್ಡ್ ಚೈನ್ ಕದ್ದು ಖದೀಮರು ಪರಾರಿಯಾಗಿದ್ದಾರೆ. 

ಶಿವಮ್ಮ ಎಂಬುವವರು ಹಾಲು ತರಲು ಹೋಗಿದ್ದ ವೇಳೆ ಪಲ್ಸರ್ ಬೈಕ್​ನಲ್ಲಿ ಬಂದ ಇಬ್ಬರು ಖದೀಮರು ಶಿವಮ್ಮರ ತಾಳಿ ಜೊತೆ ರೋಲ್ಡ್ ಗೋಲ್ಡ್ ಚೈನ್ ಕದ್ದು ಓಡಿಹೋಗಿದ್ದಾರೆ. 

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹತ್ತಿರ ಇರುವ ಸಿಸಿಟಿವಿಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.